ಮೈಸೂರು

ಡಾ.ಬಿ.ಆರ್.ಅಂಬೇಡ್ಕರ್ ಅವರ ರಾಜಗೃಹದ ಮೇಲಿನ ದಾಳಿ ಖಂಡಿಸಿ ಪ್ರತಿಭಟನೆ

ಮೈಸೂರು,ಜು.29:- ಮುಂಬೈನ ದಾದರ್ ನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ರಾಜಗೃಹದ ಮೇಲಿನ ದಾಳಿ ಖಂಡಿಸಿ ರಾಜ್ಯ ದಲಿತ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.

ಜಿಲ್ಲಾಧಿಕಾರಿಗಳ ಕಛೇರಿ ಎದುರಿಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಈ ಪೈಶಾಚಿಕ ಕೃತ್ಯದಿಂದ ನಾಗರಿಕ ಸಮಾಜದ ಸ್ವಾಸ್ಥತೆಯನ್ನು ಕೆದಕಿದಂತಾಗಿದೆ. ಅಂಬೇಡ್ಕರ್ ಅವರನ್ನು ವಿಶ್ವದ ಅನೇಕ ರಾಷ್ಟ್ರ ಗೌರವಿಸುತ್ತದೆ. ಆದರೆ ಭಾರತದ ಕೆಲ ಕಿಡಿಗೇಡಿ ಮನುವಾದಿಗಳು ಆಗಾಗ ಅವರ ಭಾವಚಿತ್ರಕ್ಕೆ ಅವಮಾನ ಮಾಡುವುದು, ಅವರ ಪುತ್ಥಳಿಯನ್ನು ವಿರೂಪಗೊಳಿಸುವುದು ಅವರ ಗೌರವಕ್ಕೆ ಧಕ್ಕೆ ತರುವಂತಹ ಕೆಲಸವನ್ನು ಮಾಡುತ್ತಾರೆ. ರಾಷ್ಟ್ರ ನಾಯಕನಿಗೆ ಅವಮಾನಿಸಿದ ವ್ಯಕ್ತಿಯನ್ನು ಬಂಧಿಸಿ ರಾಷ್ಟ್ರದ್ರೋಹಿ ಪ್ರಕರಣ ದಾಖಲಿಸಿ ಅವರ ಪೌರತ್ವವನ್ನು ರದ್ದುಮಾಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಎಂ ಪರಮೇಶ್, ನಂಜಪ್ಪ, ರಾಜಣ್ಣ, ಮಹದೇವಸ್ವಾಮಿ, ಚಂದ್ರು ಅಜಯ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: