ಕರ್ನಾಟಕ

ಸಾಮಾಜಿಕ ಜಾಲತಾಣದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಅವಹೇಳನ ಸಂದೇಶ : ಕ್ರಮಕ್ಕೆ ಒತ್ತಾಯ

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ವಿರುದ್ಧ ಅವಹೇಳನಕಾರಿ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಫ್ ಲೋಡ್‍ ಮಾಡಿದ್ದ ಜಗದೀಶ್ ಎಂಬಾತನ ವಿರುದ್ಧ ಜೆಡಿಎಸ್ ಯುವ ಮೋರ್ಚಾವು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕ್ರಮಕ್ಕೆ ಒತ್ತಾಯಿಸಿದೆ.

ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ಹಾಗೂ ವಾಟ್ಸ್ ಆ್ಯಪ್‍ಗಳಲ್ಲಿ ಜೆಡಿಎಸ್‍ನ ಹಿರಿಯ, ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ‘ದೇಶ ವಿರೋಧಿ’ ಎನ್ನುವ ಅವಹೇಳನಕಾರಿ ಸಂದೇಶವನ್ನು ಮಾ.24ರಂದು ಹಾಕಿದ್ದು ಗಮನಕ್ಕೆ ಬಂದಿದ್ದು, ಇದರಿಂದ ಕುಪಿತಗೊಂಡಿರುವ ಯುವ ಮೋರ್ಚಾ ಸದಸ್ಯ ಎಚ್.ಎಂ.ರಮೇಶ್ ಗೌಡ ಅವರು,  ಜಗದೀಶ್ ಗೌಡ ಅಲಿಯಾಸ್ ಜಗ್ಗಿ ಎಂಬಾತನನ್ನು ತಕ್ಷಣವೇ ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ. ಅಲ್ಲದೇ ಸಂಕುಚಿತ ಮನೋಭಾವನೆಯನ್ನು ತನ್ನ ಸಂದೇಶಗಳಲ್ಲಿ ವ್ಯಕ್ತಪಡಿಸುವ ಜಗ್ಗಿ ಖಾತೆಯನ್ನು ಶಾಶ್ವತವಾಗಿ ಬ್ಲಾಕ್ ಮಾಡಬೇಕೆಂದು ದೂರಿನಲ್ಲಿ ಕೋರಿದ್ದಾರೆ.  ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್‍ ದಾಖಲಾಗಿ ತನಿಖೆ ನಡೆಯುತ್ತಿದೆ. (ಕೆ.ಎಂ.ಆರ್ -ಎಸ್.ಎಚ್)

Leave a Reply

comments

Related Articles

error: