ಮೈಸೂರು

ಕುರಿಗಳ ಮಾರಾಟದಲ್ಲಿ ತೀವ್ರ ಕುಸಿತ : ಕಳೆಗುಂದಿದ ಬಕ್ರೀದ್ ಸಂಭ್ರಮ

ಮೈಸೂರು,ಜು.30:- ಈ ಬಾರಿ ಕೊರೋನಾ ಯಾವ ಹಬ್ಬವನ್ನೂ ಬಿಟ್ಟಿಲ್ಲ, ಜನತೆ ಯಾವುದನ್ನೂ  ಸಂಭ್ರಮಿಸಲು ಬಿಡಲಿಲ್ಲ. ಬಕ್ರೀದ್ ಹಬ್ಬಕ್ಕೆ ಕೂಡ ಕೊರೋನಾ ಕರಿನೆರಳು ಆವರಿಸಿದ್ದು, ಮೈಸೂರಿನಲ್ಲಿ ಕುರಿಗಳ ಮಾರಾಟದಲ್ಲಿ ತೀವ್ರ ಕುಸಿತ ಕಂಡಿದೆ.

ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಕುರಿ ಖರೀದಿ ವಹಿವಾಟಿನಲ್ಲಿ ಕುಸಿತ‌ವಾಗಿದೆ. ಬಕ್ರೀದ್ ಗೂ ಕೆಲ ದಿನಗಳ ಮೊದಲೇ  ಕುರಿಗಳ ಮಾರಾಟ ವಹಿವಾಟು ಚುರುಕುಗೊಳ್ಳುತ್ತಿತ್ತು. ಆದರೆ ಈ ಬಾರಿ ಕೊರೋನಾ ಭೀತಿಯಿಂದಾಗಿ ಕುರಿಗಳ ಮಾರಾಟದಲ್ಲಿ ಇಳಿಕೆ ಕಂಡಿದೆ. ಕುರಿ ಮಾರಾಟದಿಂದ ವ್ಯಾಪಾರಿಗಳು ದೂರು ಉಳಿದಿದ್ದಾರೆ. ಕುರಿಗಳ ಖರೀದಿಗೆ ಹಳ್ಳಿಗಳತ್ತ ಹೋಗಲು  ವ್ಯಾಪಾರಸ್ಥರು ಹಿಂದೇಟು ಹಾಕಿದ್ದಾರೆ. ಕುರಿ ಮಾರಾಟ ಮಾಡಲು ಬಂದರೂ ಕೊಳ್ಳುವವರಿಲ್ಲದೇ ನಿರಾಸೆಯಾಗಿದೆ. ದೂರದ ಊರುಗಳಿಂದ ಕುರಿಗಳನ್ನು ಮಾರಾಟ ಮಾಡಲು ಮೈಸೂರಿಗೆ ಬಂದವರು ಕಂಗಾಲಾಗಿದ್ದು, ಕುರಿ ಸಾಕಣೆದಾರರಿಗೆ ಹಾಗೂ ವ್ಯಾಪಾರಿಗಳಿಗೆ ನಷ್ಟ ಸಂಭವಿಸಿದೆ. ಕೊರೋನಾ ಮಹಾಮಾರಿ‌ಯ ಭೀತಿಯಿಂದಾಗಿ  ಬಕ್ರೀದ್ ಸಂಭ್ರಮ ಕಳೆಗುಂದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: