ಮೈಸೂರು

ಏ.1: ಮೋಜಿನ ಸಂತೆ ಕಾರ್ಯಕ್ರಮ

ಮೈಸೂರಿನ ವನಿತ ಸದನ ಟ್ರಸ್ಟ್ ವತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟಿ ಭಾರತಿ ತಿಳಿಸಿದರು.

ಮೈಸೂರಿನ  ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಏಪ್ರಿಲ್ 1 ರಂದು ಬೆಳಿಗ್ಗೆ 10:30 ರಿಂದ ಸಂಜೆ 5 ಗಂಟೆಯವರಗೆ ಮೋಜಿನ ಸಂತೆ ಕಾರ್ಯಕ್ರಮ ಮತ್ತು  ಏಪ್ರಿಲ್ 15 ಹಾಗೂ 16 ರಂದು ಚಿತ್ರಕಲಾ ಸ್ಪರ್ಧೆ  ಹಾಗೂ ಪ್ರದರ್ಶನ, ಏಪ್ರಿಲ್ 22 ರಂದು ವಾಸು ದೀಕ್ಷೀತ್ ರವರಿಂದ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳು ಟ್ರಸ್ಟ್ ನ ಸಭಾಂಗಣದಲ್ಲಿ ಜರುಗಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ  ಸದಸ್ಯರಾದ  ಶ್ರೀವಿದ್ಯಾ, ವಿನೂತ, ಸೂರ್ಯನಾರಾಯಣ್, ವಾಸು ದೀಕ್ಷಿತ್ ಉಪಸ್ಥಿತರಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: