ಮೈಸೂರು

ಚುನಾವಣಾ ವೆಚ್ಚದ ಮಾಹಿತಿ ಹಾಜರು ಪಡಿಸದ ಡಿ.ಕೆ.ತುಳಸಪ್ಪ : ನೋಟೀಸ್ ಜಾರಿ

ನಂಜನಗೂಡು ವಿಧಾನ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಡಿ.ಕೆ.ತುಳಸಪ್ಪ ಚುನಾವಣಾಧಿಕಾರಿಗಳು ನಿರ್ದಿಷ್ಟ ಪಡಿಸಿದ ದಿನದಂದು ತಮ್ಮ ಚುನಾವಣಾ ವೆಚ್ಚದ ಮಾಹಿತಿಗಳನ್ನು ಪರಿಶೀಲನೆಗೆ ಹಾಜರು ಪಡಿಸಿಲ್ಲದ ಕಾರಣ  ಅವರಿಗೆ ಚುನಾವಣಾಧಿಕಾರಿಗಳು ನೋಟೀಸ್ ಜಾರಿ ಮಾಡಿದ್ದಾರೆ.

ಡಿ.ಕೆ.ತುಳಸಪ್ಪ ನಂಜನಗೂಡು ವಿಧಾನ ಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಪ್ರಜಾಪ್ರಾತಿನಿಧ್ಯ ಅಧಿನಿಯಮ ಕಾಯಿದೆ 1951ರ ಸೆಕ್ಷನ್ 77ರನ್ವಯ ಚುನಾವಣಾ ವೆಚ್ಚವನ್ನು ಕಡ್ಡಾಯವಾಗಿ ನಿರ್ವಹಿಸಬೇಕಾಗಿದ್ದು, ಚುನಾವಣಾಧಿಕಾರಿಗಳು ನಿರ್ದಿಷ್ಟ ಪಡಿಸಿದ ದಿನದಂದು ಚುನಾವಣಾ ಪರಿಶೀಲನಾಧಿಕಾರಿಗಳಿಗೆ ಪರಿಶೀಲನೆಗಾಗಿ ಲೆಕ್ಕಪತ್ರಗಳನ್ನು ಹಾಜರು ಪಡಿಸಬೇಕಿತ್ತು. ಈ ಕುರಿತು ಮಾರ್ಚ್ 28ರಂದು ಪರಿಶೀಲನೆಗೆ ದಿನ ನಿಗದಿಪಡಿಸಿ ತಿಳುವಳಿಕೆ ನೀಡಲಾಗಿತ್ತು. ಆದರೆ ಆ ದಿನ ಅವರು ವೆಚ್ಚದ ಪತ್ರಗಳನ್ನು ಹಾಜರುಪಡಿಸಿಲ್ಲ. ದೂರವಾಣಿ ಕರೆಗೂ ಸ್ಪಂದಿಸಿಲ್ಲ. ಈ ಕುರಿತು ಕಾರಣ ಕೇಳಿ ಅವರಿಗೆ ನೋಟಿಸ್ ಹಾರಿ ಮಾಡಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಏಪ್ರಿಲ್ 3ರಂದು ಕಡ್ಡಾಯವಾಗಿ ಲೆಕ್ಕ ಪತ್ರಗಳೊಂದಿಗೆ ಹಾಜರಾಗಬೇಕು. ತಪ್ಪಿದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಕುರಿತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ. (ಎಸ್.ಎಚ್)

Leave a Reply

comments

Related Articles

error: