ಪ್ರಮುಖ ಸುದ್ದಿಮೈಸೂರು

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಏಕಪ್ರತಿಮೆ ಸ್ಥಾಪನೆಗಾಗಿ ಮೈಸೂರು ಮತ್ತು ಮಂಡ್ಯ ಹೋರಾಟ ಸಮಿತಿಯಿಂದ ಸಿಎಂ ಭೇಟಿ

ಮೈಸೂರು,ಜು.30:- ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಏಕಪ್ರತಿಮೆ ಸ್ಥಾಪನೆಗಾಗಿ ಮೈಸೂರು ಮತ್ತು ಮಂಡ್ಯ ಹೋರಾಟ ಸಮಿತಿ ವತಿಯಿಂದ ಇಂದು  ಮುಖ್ಯಮಂತ್ರಿ ಯಡಿಯೂರಪ್ಪ ನವರನ್ನು ಬೆಂಗಳೂರಿನ ಕೃಷ್ಣಾದಲ್ಲಿ   ಇತಿಹಾಸ ತಜ್ಞ ಪ್ರೊ.ಪಿ.ವಿ ನಂಜರಾಜ ಅರಸು  ಅವರ   ಭೇಟಿ ಮಾಡಿ ಕೃಷ್ಣರಾಜ ಸಾಗರ  ( ಕೆ.ಆರ್.ಎಸ್ ) ದಲ್ಲಿ ನಾಲ್ವಡಿ ಅವರ ಏಕಪ್ರತಿಮೆ ಸ್ಥಾಪಿಸಲು ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು  ಸಕಾರಾತ್ಮಕವಾಗಿ ಸ್ಪಂದಿಸಿ ಪರಿಶೀಲಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕೊಳ್ಳೇಗಾಲ ಕ್ಷೇತ್ರದ ಶಾಸಕರಾದ ಎನ್.ಮಹೇಶ್ , ಕರ್ನಾಟಕ ಸಂಘದ ಅಧ್ಯಕ್ಷರಾದ ಜಯಪ್ರಕಾಶ್ ಗೌಡ  ( ಮಂಡ್ಯ ) , ಮಾಜಿ ಮೇಯರ್ ಪುರುಷೋತ್ತಮ್ , ಏಕಪ್ರತಿಮೆ ಹೋರಾಟದ ಸಂಚಾಲಕರಾದ ಅರವಿಂದ್ ಶರ್ಮ ,ಕನ್ನಡ ಹೋರಾಟಗಾರರಾದ ಧನಪಾಲ್ ಕುರುಬರಹಳ್ಳಿ  , ಬೋವಿ ನಿಗಮ ಮಂಡಳಿ ಮಾಜಿ  ಅಧ್ಯಕ್ಷರಾದ ಜಿ.ವಿ  ಸೀತಾರಾಮ್ , ಕರ್ನಾಟಕ ರಾಜ್ಯ  ರೈತ ಸಂಘ ( ಹಸಿರು ಸೇನೆ ) ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ  ಹೊಸಕೋಟೆ ಬಸವರಾಜು , ವಿಜಯ ದೇವರಾಜೇ ಅರಸ್ ಬಿ.ವಿ.ಎಸ್. ನ ಸಿದ್ದರಾಜು ಸೋಸಲೆ , ಎಂ.ಬಿ ಶ್ರೀನಿವಾಸ್ ಮಂಡ್ಯ ಇತರರು ಉಪಸ್ಥಿತರಿದ್ದರು . (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: