ಮೈಸೂರು

ಏ.1 : ವಾಟಾಳ್ ನಾಗರಾಜ್ ಕುರಿತು ಐತಿಹಾಸಿಕ ಸಮಾರಂಭ

ಮೈಸೂರು ಜಿಲ್ಲಾ ಕನ್ನಡ ಚಳುವಳಿಗಾರರ ಸಂಘದಿಂದ 50 ವರ್ಷಗಳ ಕಾಲ ಕನ್ನಡಕ್ಕಾಗಿ ಮಹಾನ್ ಹೋರಾಟ ನಡೆಸಿದ ವಾಟಾಳ್ ನಾಗರಾಜ್, ಶಾಸನ ಸಭೆಗೆ ಪ್ರವೇಶ- 50,  ಎನ್ನುವ ವಿಶೇಷ,  ಅಪರೂಪದ ಐತಿಹಾಸಿಕ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಬಿ.ಎ.ಶಿವಶಂಕರ್ ತಿಳಿಸಿದರು.

ಮೈಸೂರಿನ  ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಏಪ್ರಿಲ್ 1 ರಂದು ಜಿಲ್ಲಾ ಪತ್ರಕರ್ತರ ಭವನದಲ್ಲಿ ಕಾರ್ಯಕ್ರಮವನ್ನು  ಏರ್ಪಡಿಸಲಾಗಿದ್ದು, ಸಮಾರಂಭವನ್ನು ಸಾಹಿತಿಗಳಾದ ಡಾ.ಸಿ.ಪಿ.ಕೃಷ್ಣಮೂರ್ತಿ ಉದ್ಘಾಟಿಸಲಿದ್ದಾರೆ ಎಂದರು.

50 ವರ್ಷಗಳಿಂದ ಮಹಾನ್ ಹೋರಾಟಗಾರನೆನಿಸಿದ ಕನ್ನಡ ಚಳುವಳಿಯ ಮಹಾನ್ ನಾಯಕ, ಮಾತಿನ ಮಲ್ಲ, ನಾಡು ನುಡಿಗೆ ಇಡೀ ಜೀವನವನ್ನೇ ಅರ್ಪಣೆ ಮಾಡಿಕೊಂಡ ಆದರ್ಶ ವ್ಯಕ್ತಿ, ವಾಟಾಳ್  ನಾಗರಾಜ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಸಭಾತ್ಯಾಗ ಮಾಡಿದ ನೆನಪಿನ ದಿನವಾಗಿ ಅವರೊಂದಿಗೆ ಮಾತು ಕಥೆ ನಡೆಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ  ಉಪಾಧ್ಯಕ್ಷ ಶ್ರೀಕಂಠ, ಸಹ ಕಾರ್ಯದರ್ಶಿ ಪಿ.ಜಯಕುಮಾರ್, ಕಾರ್ಯದರ್ಶಿ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.  (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: