ಮೈಸೂರು

ಉದ್ಯಾನವನಗಳ ಅಭಿವೃದ್ಧಿಗೆ ಸಂಕಲ್ಪ

ಮೈಸೂರು,ಜು.31:- ವಾರ್ಡ್ ನಂಬರ್ 51ರ ರಾಮಾನುಜ ರಸ್ತೆ ಶ್ರೀನಿವಾಸ ಅಗ್ರಹಾರದ ಉದ್ಯಾನವನಕ್ಕೆ  ಹೊಸದಾಗಿ 15ಲಕ್ಷ ವೆಚ್ಚದಲ್ಲಿ ಕಾಂಪೌಂಡ್ ಗ್ರಿಲ್ ಅಳವಡಿಸುವ ಕಾಮಗಾರಿಗೆ ಶಾಸಕ ಎಸ್.ಎ.ರಾಮದಾಸ್ ನಿನ್ನೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಅಗ್ರಹಾರ ವಾರ್ಡ್ ನಂಬರ್ 51ರ ಎಲ್ಲ ಉದ್ಯಾನವನವನ್ನು  ಸಮಗ್ರವಾಗಿ ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈಗಾಗಲೇ ಮೂರು ಉದ್ಯಾನವನದ ಕಾಮಗಾರಿ ನಡೆಯುತ್ತಿದೆ. ಇಂದು ಶ್ರೀನಿವಾಸ ಅಗ್ರಹಾರದ ಮತ್ತೊಂದು ಉದ್ಯಾನವನದ ಅಭಿವೃದ್ಧಿ ಕಾಮಗಾರಿ ಕೂಡ ಪ್ರಾರಂಭಿಸಿ ಭೂಮಿ ಪೂಜೆ ನಡೆಸಲಾಗಿದೆ. ರಾಮಾನುಜ ರಸ್ತೆಯ ಉಳಿದ ಮತ್ತೊಂದು ಪಾರ್ಕ್ ನ್ನು ಅಭಿವೃದ್ಧಿಪಡಿಸಲು ಸದ್ಯದಲ್ಲಿಯೇ ಹಣ ಒದಗಿಸಲಾಗುವುದು ಎಂದರು.

ವಾರ್ಡ್ ನಂಬರ್ 51ರ ಅಗ್ರಹಾರದಲ್ಲಿ ಬರುವ ರಾಮಾನುಜ ರಸ್ತೆಯಲ್ಲಿನ ಒಟ್ಟು 4ಉದ್ಯಾನವನಗಳು, ತ್ಯಾಗರಾಜ ರಸ್ತೆ 5ನೇ ಕ್ರಾಸ್ ನ ಉದ್ಯಾನವನ, ಗನ್ ಹೌಸ್ ಎದುರಿನ ವಿಶ್ವಮಾನವ ಉದ್ಯಾನವನ ಇವುಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಬೇಕೆಂಬ ದೃಷ್ಟಿಯಿಂದ ಚರ್ಚಿಸಿ ವ್ಯವಸ್ಥಿತ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರದ ಎಂ.ಆರ್.ಬಾಲಕೃಷ್ಣ, ಕೆ.ಆರ್.ಬ್ಯಾಂಕ್ ನಿರ್ದೇಶಕರಾದ ಹೆಚ್.ವಿ.ಭಾಸ್ಕರ್, ಸರ್ವ ಮಂಗಳ, ಓಂಪ್ರಕಾಶ್ , ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಾಂತ, ಮಮತ, ಕಾವೇರಿ, ಅನಿತ ಬಂಗಾರಪ್ಪ, ವಲಯ 1ರ ಅಧಿಕಾರಿ ಶುಶ್ರೂತ್, ಇಂಜಿನಿಯರ್ ಸಂತೋಷ್, ಗುತ್ತಿಗೆದಾರ ಜಗನ್ನಾಥ್, ವಾರ್ಡ್ ನ ಕಾರ್ಯಕರ್ತರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: