ಲೈಫ್ & ಸ್ಟೈಲ್

ಯುವತಿಯರನ್ನು ಆಕರ್ಷಿಸಲು ಇವುಗಳನ್ನು ಪಾಲಿಸಲೇ ಬೇಕು !

ಯುವಕರಿಗೆ ಯುವತಿಯರನ್ನು ಆಕರ್ಷಿಸಬೇಕು ಎನ್ನುವ ಅತೀವ ಹಂಬಲವಿರುತ್ತದೆ. ಆರೋಗ್ಯಯುತ, ಸದೃಢ ಪುರುಷನನ್ನು ಮಹಿಳೆ ಇಷ್ಟಪಡುತ್ತಾಳೆ. ಮಹಿಳೆಯರು ಎಂಥ ಪುರುಷರನ್ನು ಹೆಚ್ಚು ಇಷ್ಟಪಡುತ್ತಾರೆ ಎಂಬುದನ್ನು ಹಾರ್ವರ್ಡ್ ಮೆಡಿಕಲ್ ಸ್ಕೂಲ್ ನ ಇತ್ತೀಚಿನ ಸಂಶೋಧನೆ ತಿಳಿಸಿದೆಯಂತೆ. ಹಾಗಾದರೆ ಮಹಿಳೆಯರನ್ನು ಆಕರ್ಷಿಸಲು ಪುರುಷ ಯಾವ ರೀತಿ ಇರಬೇಕು ..?

ಬಾಯಿಯ ದುರ್ಗಂಧ  ದೂರವಿಡಿ : ಹೊಟ್ಟೆಯಲ್ಲಿನ ಅನಾರೋಗ್ಯ, ಬ್ರಶ್ ಮಾಡದಿರುವುದು, ಬಾಯಿಯಲ್ಲಿ ಇನ್ ಫೆಕ್ಷನ್ , ನಾಲಿಗೆಯನ್ನು ಸ್ವಚ್ಛಗೊಳಿಸದಿರುವುದು ಇವು ಬಾಯಿಯಲ್ಲಿ ದುರ್ಗಂಧವನ್ನುಂಟು ಮಾಡಬಹುದು. ಹೀಗಾಗದಂತೆ ತಡೆಯಲು ಹೆಚ್ಚು ಫಾಯ್ಬರ್ ಇರುವ ಆಹಾರ ಸೇವಿಸಿ. ಹೊಟ್ಟೆಯನ್ನು ಖಾಲಿ ಇಡಬೇಡಿ. ಚುಯಿಂಗಮ್ ಅಗಿಯಿರಿ. ಮೌಥ್ ಫ್ರೆಶನರ್ ಉಪಯೋಗಿಸಿ. ಪ್ರತಿದಿನ ಬ್ರಶ್ ಮಾಡಿ. ನಾಲಿಗೆಯನ್ನು ಸ್ವಚ್ಛಗೊಳಿಸಿ.

ತಲೆಹೊಟ್ಟು : ಒಣತ್ವಚೆ, ತಲೆಗೆ ಹೆಚ್ಚು ಎಣ್ಣೆಯನ್ನು ಬಳಿದುಕೊಳ್ಳುವುದು, ಒತ್ತಡ, ಹಾರ್ಮೋನ್ ಗಳ ಅಸಮತೋಲನದಿಂದ ತಲೆಹೊಟ್ಟು ಉಂಟಾಗಲಿದೆ. ಇದರಿಂದ ದೂರವಿರಲು ಪ್ರತಿಸಲ ಆ್ಯಂಟಿ ಡೆಂಡ್ರಫ್ ಶ್ಯಾಂಪು ಬಳಸಿ. ಕೂದಲುಗಳು ಸದಾ ಒರಟಾಗಿರದಂತೆ ನೋಡಿಕೊಳ್ಳಿ. ಒತ್ತಡದಿಂದ ದೂರವಿರಿ.

ಕಾಂತಿಹೀನ ಮುಖ : ಕಡಿಮೆ ನೀರು ಕುಡಿಯುವುದು. ಬಿಸಿಲಿನಲ್ಲಿ ಜಾಸ್ತಿ ಹೊತ್ತು ಇರುವುದು. ನಿದ್ರೆ ಸರಿಯಾಗಿ ಆಗದಿರುವುದು. ಧೂಮ್ರಪಾನ ಸೇವನೆ ಇವುಗಳಿಂದ ಮುಖ ಕಾಂತಿ ಕಳೆದುಕೊಳ್ಳಲಿದೆ. ಹೀಗಾಗದಿರಲು ಸಾಕಷ್ಟು ನೀರು ಕುಡಿಯಿರಿ. ಬಿಸಿಲಿನಲ್ಲಿ ಹೋಗುವಾಗ ಸನ್ ಸ್ಕ್ರೀನ್ ಕ್ರೀಮ್ ಹಚ್ಚಿರಿ. ಧೂಮ್ರಪಾನ ಮಾಡದಿರಿ. ಸಾಕಷ್ಟು ನಿದ್ರೆ ಮಾಡಿ.

ಬೊಜ್ಜು : ದೈಹಿಕವಾಗಿ ಚಟುವಟಿಕೆಯಿಂದಿಲ್ಲದಿರುವುದು, ಜಂಕ್ ಫುಡ್ ಮತ್ತು ಎಣ್ಣೆಯುಕ್ತ ಆಹಾರ ಸೇವಿಸುವುದು. ಹಾರ್ಮೋನ್ ಗಳ ಅಸಮತೋಲನ, ಸರಿಯಾಗಿ ನಿದ್ರೆ ಮಾಡದಿರುವುದು ಮತ್ತು ಹೆಚ್ಚು ಆಹಾರ ಸೇವಿಸುವುದರಿಂದ ದೇಹದಲ್ಲಿ ಬೊಜ್ಜು ಸೇರಿಕೊಳ್ಳುತ್ತದೆ. ಹೀಗಾಗದಿರಲು ಪ್ರತಿದಿನ ಮುಂಜಾನೆ ಬೆಚ್ಚನೆಯ ನೀರಿಗೆ ಲಿಂಬುರಸ ಸೇವಿಸಿ ಕುಡಿಯಿರಿ. ವಾಕ್ ಮಾಡಿ ಇಲ್ಲವೇ ವ್ಯಾಯಾಮ, ಯೋಗಗಳನ್ನು ಮಾಡಿ, ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚು ಸೇವಿಸಿ. ಜಂಕ್ ಫುಡ್ ಗಳನ್ನು ತ್ಯಜಿಸಿ. ಸರಿಯಾಗಿ ನಿದ್ರೆ  ಮಾಡಿ.

ಬಿಳಿಕೂದಲು : ಒತ್ತಡ, ಧೂಮ್ರಪಾನ, ಸರಿಯಾಗಿ ನೀರು, ಆಹಾರ ಸೇವಿಸದಿರುವುದರಿಂದ ಕೂದಲು ಬೆಳ್ಳಗಾಗುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ದಣಿವು ಮತ್ತು ಒತ್ತಡದಿಂದ ದೂರವಿರಿ. ಸರಿಯಾಗಿ ನಿದ್ರೆ ಮಾಡಿ. ಧೂಮ್ರಪಾನ, ಮದ್ಯಪಾನಗಳನ್ನು ಮಾಡದಿರಿ.

ಗ್ಯಾಸ್ಟ್ರಿಕ್ : ಆಹಾರ ಸರಿಯಾಗಿ ಪಚನಗೊಳ್ಳದಿರುವುದು, ಆಹಾರ ಸೇವಿಸುವಾಗ ಗಡಿಬಿಡಿ, ಅವಸರವಸರವಾಗಿ ಆಹಾರ ಸೇವನೆ ಇವುಗಳಿಂದ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗಲಿದೆ. ಇದನ್ನು ನಿವಾರಿಸಲು ಫಾಯ್ಬರ್ ಯುಕ್ತ ಆಹಾರ ಸೇವಿಸಿ. ಸಾಕಷ್ಟು ನೀರು ಕುಡಿಯಿರಿ. ಹೆಚ್ಚು ಕಾಫಿ, ಚಹಗಳನ್ನು ಸೇವಿಸದಿರಿ. ಆಹಾರವನ್ನು ಅಗಿದು ತಿನ್ನಿ.

ಹಳದಿ ಹಲ್ಲು : ಪ್ರತಿದಿನ ಬ್ರಶ್ ಮಾಡದಿರುವುದು, ಹೆಚ್ಚು ಚಹ-ಕಾಫಿ ಸೇವಿಸುವುದು, ಧೂಮ್ರಪಾನ, ತಂಬಾಕು ಸೇವನೆ ಇವುಗಳಿಂದ ಹಲ್ಲು ಹಳದಿಗಟ್ಟುತ್ತದೆ. ಇದರಿಂದ ದೂರವಿರಲು ಬೆಳಿಗ್ಗೆ ಅಥವಾ ಆಹಾರ ಸೇವಿಸಿದ ತಕ್ಷಣ ಬ್ರಶ್ ಮಾಡಿ. ಹೆಚ್ಚು ಚಹ-ಕಾಫಿ ಸೇವಿಸಬೇಡಿ. ತಂಬಾಕು-ಪಾನ್, ಧೂಮ್ರಪಾನಗಳಿಂದ ದೂರವಿರಿ, ಸ್ವಚ್ಛ ನೀರನ್ನು ಹೆಚ್ಚು ಸೇವಿಸಿ.

ಬೆವರು ವಾಸನೆ : ಬೊಜ್ಜು, ಹೆಚ್ಚು ಸ್ಪೈಸಿ ಆಹಾರಗಳ ಸೇವನೆ, ಧೂಮ್ರಪಾನ ಮತ್ತು ಮದ್ಯಪಾನ, ಔಷಧ ಸೇವನೆ, ಬಟ್ಟೆಗಳನ್ನು ಶುಭ್ರಗೊಳಿಸದಿರುವುದರಿಂದ ದೇಹದಲ್ಲಿ ಬೆವರಿನ ವಾಸನೆ ಹೆಚ್ಚಲಿದೆ. ಇದರಿಂದ ದೂರವಿರಲು ತೂಕ ನಿಯಂತ್ರಣದಲ್ಲಿಡಿ. ಸ್ಪೈಸಿ ಆಹಾರಗಳನ್ನು ತ್ಯಜಿಸಿ. ಹೆಚ್ಚು ನೀರು ಕುಡಿಯಿರಿ. ಅನಗತ್ಯ ಔಷಧ ಸೇವಿಸದಿರಿ.ಶುಭ್ರವಾದ ಬಟ್ಟೆಗಳನ್ನು ಧರಿಸಿ. ಇವುಗಳನ್ನು ನೀವು ಪಾಲಿಸುವುದರಿಂದ ಹೆಚ್ಚು ಆರೋಗ್ಯಯುತರಾಗಿ, ಸದೃಢವಾಗಿ ಕಾಣುವುದರಲ್ಲಿ ಸಂಶಯವಿಲ್ಲ.  (ಎಸ್.ಎಚ್)

 

 

Leave a Reply

comments

Related Articles

error: