ಮೈಸೂರು

64ನೇ ವಾರ್ಡ್ ಗೆ ಸ್ಯಾನಿಟೈಸ್ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡ ಕಾಂಗ್ರೆಸ್ ಯುವ ಮುಖಂಡ

ಮೈಸೂರು,ಜು.31:- ಕೋವಿಡ್-19ರ ಹಿನ್ನೆಲೆಯಲ್ಲಿ ಜನ ತತ್ತರಿಸಿ ಹೋಗುತ್ತಿದ್ದು , ಜೀವನ ನಡೆಸಲು   ಪರದಾಡುವ ಪರಿಸ್ಥಿತಿ ನಿರ್ಮಾಣ ವಾಗಿದೆ.  ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಯುವ ಮುಖಂಡರೋರ್ವರು ಇಡೀ ವಾರ್ಡ್ ಗೆ ಸ್ಯಾನಿಟೈಸ್ ಮಾಡುವ ಮೂಲಕ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡು ಸಾರ್ಥಕತೆ ಮೆರೆದಿದ್ದಾರೆ,

ಹಾರ, ತುರಾಯಿ, ಕೇಕು ಪಾರ್ಟಿ ಎನ್ನದೆ ಜನರ ಸಂಕಷ್ಟಕ್ಕೆ ಸ್ಪಂದಿಸುವ ಕಾರ್ಯ ಮಾಡಿದ್ದಾರೆ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿಯಾದ ರಾಜೇಶ್ ಎಂ, ಅವರು ತಮ್ಮ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ  ತಮ್ಮ‌ಸ್ವಂತ ಖರ್ಚಿನಲ್ಲಿ ವಾರ್ಡ್ ನಂ . 64  ರಲ್ಲಿ  ಸ್ಯಾನಿಟೈಸ್ ಮಾಡಿಸುವ ಮೂಲಕ   ಸಾರ್ವಜನಿಕರ ತೊಂದರೆಗಳಿಗೆ ಸ್ಪಂದಿಸಲು ಮುಂದಾಗಿದ್ದಾರೆ. ತಮ್ಮದೇ ತಂಡ ಕಟ್ಟಿಕೊಂಡು ಜನರ ಸೇವೆಗೆ ನಿಂತಿದ್ದಾರೆ,

ಇಂದು ನಗರದ ವಿವೇಕಾನಂದ ನಗರ ವೃತ್ತದಲ್ಲಿರುವ ಗಣಪತಿ ದೇವಸ್ಥಾನದ ಮುಂಭಾಗದಿಂದ ವಾರ್ಡ್ ಸ್ಯಾನಿಟೈಸ್ ಗೆ ಚಾಲನೆ ನೀಡಲಾಯಿತು , ಕಳೆದ ನಗರ ಪಾಲಿಕೆ ಚುನಾವಣೆಯಲ್ಲಿ ಸೋತರೂ ಸಹ ಅದೇ ವಾರ್ಡ್ ನಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ ರಾಜೇಶ್ ಎಂ. ಮತ್ತವರ ಧರ್ಮಪತ್ನಿ ಶೋಭರಾಜೇಶ್ ,

ಇದೇ ರೀತಿಯಲ್ಲಿ ಪ್ರತಿಯೊಬ್ಬರೂ ಮುಂದಿನ ದಿನಗಳಲ್ಲಿ ಜನ್ಮದಿನ ಇನ್ನಿತರ ಸಮಾರಂಭಗಳಿಗೆ ‌ದುಂದುವೆಚ್ಚ ಮಾಡದೆ ಈ ರೀತಿಯ ಸಾಮಾಜಿಕ ಕಳಕಳಿಯುಳ್ಳ ಕಾರ್ಯಗಳನ್ನು ಮಾಡಿದರೆ ಜನರಿಗೆ ಸಹಾಯವಾಗಬಹುದು.

ಈ   ಸಂದರ್ಭದಲ್ಲಿ ಇತಿಹಾಸ ತಜ್ಞ ಪ್ರೊ. ನಂಜರಾಜೇ ಅರಸ್ , ಲೋಕೇಶ್ ತೇಜಸ್ ಗೌಡ , ಪ್ರದೀಪ್ ಸೇರಿದಂತೆ ಹಲವರು ಸ್ಥಳದಲ್ಲಿ ಸೇರಿ ಅವರ ಕಾರ್ಯವನ್ನು ಶ್ಲಾಘಿಸಿದರಲ್ಲದೆ ಜನ್ಮದಿನಕ್ಕೆ ಶುಭ ಹಾರೈಸಿ, ನಿಮ್ಮಿಂದ ಇನ್ನಷ್ಟು ಒಳ್ಳೆಯ ಕಾರ್ಯಗಳು ನಡೆಯುವಂತಾಗಲಿ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: