ದೇಶ

ರಾಜ್ಯಸಭಾ ನೀತಿ ಸಮಿತಿ ಅಧ್ಯಕ್ಷರಾಗಿ ಸಂಸದ ಶಿವಪ್ರತಾಪ್ ಶುಕ್ಲಾ ನೇಮಕ

ನವದೆಹಲಿ,ಜು.31-ರಾಜ್ಯಸಭೆಯ ನೀತಿ ಸಮಿತಿ ಅಧ್ಯಕ್ಷರನ್ನಾಗಿ ಬಿಜೆಪಿ ಸಂಸದ ಶಿವಪ್ರತಾಪ್ ಶುಕ್ಲಾ ಅವರನ್ನು ನೇಮಕ ಮಾಡಲಾಗಿದೆ.

ಈ ವಿಚಾರವನ್ನು ರಾಜ್ಯಸಭಾ ಪ್ರಧಾನ ಕಾರ್ಯದರ್ಶಿ ದೇಶ್ ದೀಪಕ್ ವರ್ಮಾ ತಿಳಿಸಿದ್ದಾರೆ. ಶುಕ್ಲಾ ಅವರನ್ನು ಬಿಟ್ಟು ಇತ್ತೀಚೆಗೆ ರಾಷ್ಟ್ರಪತಿ ವೆಂಕಯ್ಯ ನಾಯ್ಡು ನೀತಿ ಸಮಿತಿಗೆ ಮೂವರನ್ನು ನೇಮಿಸಿದ್ದರು. ಡಿಎಂಕೆಯ ತಿರುಚ್ಚಿ ಶಿವ, ಟಿಆರ್ ಎಸ್ ನ ಡಾ.ಕೇಶವ ರಾವ್, ಮತ್ತು ವೈಆರ್ ಎಲ್ ಕಾಂಗ್ರೆಸ್ ವಿ ವಿಜಯ ರೆಡ್ಡಿ ಅವರನ್ನು ನೇಮಿಸಿದ್ದರು.

ಶುಕ್ಲಾ ಅವರ ನೇಮಕದಿಂದ ರಾಜ್ಯಸಭೆ ನೀತಿ ಸಮಿತಿ ಸದಸ್ಯರ ಸಂಖ್ಯೆ 11 ಕ್ಕೇರಿದೆ, ಸಂಸದ ಆನಂದ್ ಶರ್ಮಾ, ರಾಮ್ ಗೋಪಾಲ್ ಯಾದವ್,ಎಂ ನವನೀತ್ ಕೃಷ್ಣನ್, ಡೆರೆಕ್ ಓ ಬ್ರೆನ್, ರಾಮ್ ಚಂದ್ರ, ಪ್ರಸನ್ನ ಆಚಾರ್ಯ ಮತ್ತು ಬಿಜು ಅವರನ್ನು ನೇಮಿಸಲಾಗಿದೆ.

ಸಂಸದರ ವರ್ತನೆ ಮತ್ತು ಚಟುವಟಿಕೆಗಳ ವಿರುದ್ಧದ ದೂರುಗಳನ್ನು ಪರಿಶೀಲಿಸುವ ಜವಾಬ್ದಾರಿಯನ್ನು ನೈತಿಕ ಸಮಿತಿಯು ಹೊಂದಿದೆ. ಜು.21 ರಂದು ರಾಜ್ಯಸಭೆಯಲ್ಲಿ ಬಿಜೆಪಿ ಪಕ್ಷದ ಮುಖ್ಯ ಸಚೇತಕರಾಗಿ ಶುಕ್ಲಾ ಅವರನ್ನು ನೇಮಿಸಿತ್ತು. (ಎಂ.ಎನ್)

Leave a Reply

comments

Related Articles

error: