ಪ್ರಮುಖ ಸುದ್ದಿ

ಹಿರಿಯ ವಿಜ್ಞಾನಿ ಕಸ್ತೂರಿ ರಂಗನ್ ಭೇಟಿಯಾಗಿ ಅಭಿನಂದಿಸಿದ ಸಿಎಂ

ರಾಜ್ಯ( ಬೆಂಗಳೂರು)ಆ.1:- ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಸಮಿತಿಯ (NEP) ಅಧ್ಯಕ್ಷರಾದ ಹಿರಿಯ ವಿಜ್ಞಾನಿ ಕಸ್ತೂರಿ ರಂಗನ್ ಅವರನ್ನು ಭೇಟಿಯಾಗಿ‌ ಅವರಿಗೆ ಅಭಿನಂದನೆ ಸಲ್ಲಿಸಿದರು.

ಉಪ ಮುಖ್ಯಮಂತ್ರಿ ಗಳಾದ ಡಾ.ಅಶ್ವಥ್ ನಾರಾಯಣ್ ವಿಧಾನಪರಿಷತ್ ಸದಸ್ಯರಾದ ರವಿಕುಮಾರ್ ಉಪಸ್ಥಿತರಿದ್ದರು.

ಕಸ್ತೂರಿ ರಂಗನ್ ಅವರು 2019 ರ‌ ಮೇ ನಲ್ಲಿ ಹೊಸ ಶಿಕ್ಷಣ ನೀತಿಯ ವರದಿಯನ್ನು‌ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು.‌ ಕೇಂದ್ರ ಸರ್ಕಾರ ಶ್ರೀ ಕಸ್ತೂರಿ ರಂಗನ್ ಅವರ ವರದಿಯನ್ನು‌ 2020 ಜುಲೈ 29 ರಂದು ದೇಶಾದ್ಯಂತ ಜಾರಿಗೆ ತಂದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: