ಮೈಸೂರು

ಬಿರುಸಿನಿಂದ ನಡೆಯುತ್ತಿದೆ ಚುನಾವಣಾ ಪ್ರಚಾರ

ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಗುರುವಾರ  ಬಿಜೆಪಿ ಪ್ರಚಾರ ಕಾರ್ಯವನ್ನು ಮತ್ತಷ್ಟು ಬಿರುಸುಗೊಳಿಸಲು ಮುಂದಾಗಿದೆ.
ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್  ಚುನಾವಣಾ ಪ್ರಚಾರದ ಅಖಾಡಕ್ಕೆ ಧುಮುಕಿದ್ದಾರೆ. ಮೊದಲಿಗೆ ನಂಜನಗೂಡು ಪಟ್ಟಣದಲ್ಲಿ ಪ್ರಚಾರ ಆರಂಭಿಸಿದರು. ನಂಜನಗೂಡು ನಗರಸಭೆಯ ವಾರ್ಡ್ ಸಂಖ್ಯೆ 1, 2, 3 ಮತ್ತು 4 ರ ವ್ಯಾಪ್ತಿಯ ಪ್ರದೇಶಗಳಲ್ಲಿ ಪ್ರಚಾರ ನಡೆಸಿದರು. ನಂತರ ನಂಜನಗೂಡು ತಾಲೂಕಿನ ದೇವರಸನಹಳ್ಳಿ ಗ್ರಾಮ ಸೇರಿದಂತೆ ಆಸುಪಾಸಿನ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸಪ್ರಸಾದ್ ಪರವಾಗಿ ಪ್ರಚಾರ ನಡೆಸಿದರು.ಆರ್. ಅಶೋಕ್ ಗೆ ನಟ ಜಗ್ಗೇಶ್, ಶಾಸಕ ಕೃಷ್ಣಪ್ಪ ಸಾಥ್ ನೀಡಲಿದ್ದು,
ಕಾಂಗ್ರೆಸ್ ಪರವಾಗಿ ಸಂಸದ ಆರ್  ಧ್ರುವನಾರಾಯಣ್ ಪ್ರಚಾರ ನಡೆಸಲಿದ್ದಾರೆ. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: