ಮೈಸೂರು

ಬಿಜೆಪಿಯ ನೂತನ ರಾಜ್ಯ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗೆ ಸನ್ಮಾನ

ಮೈಸೂರು,ಆ.1-ಭಾರತೀಯ ಜನತಾ ಪಾರ್ಟಿಗೆ ರಾಜ್ಯ ಉಪಾಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿರುವ ಮೂವರನ್ನು ಇಂದು ನಗರ ಬಿಜೆಪಿ ಕಚೇರಿಯಲ್ಲಿ ಸನ್ಮಾನಿಸಲಾಯಿತು.

ಬಿಜೆಪಿ ಕಚೇರಿಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಸಂಸದ ಪ್ರತಾಪ್ ಸಿಂಹ, ಎಂ.ರಾಜೇಂದ್ರ, ಮೈಸೂರು ಗ್ರಾಮಾಂತರದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಜಿ ವಿಧಾನ ಪರಿಷತ್ ಸದಸ್ಯ ಸಿದ್ದರಾಜು ಅವರನ್ನು ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ರವಿಶಂಕರ್, ಗಿರಿಧರ್, ಅರುಣ್ ಕುಮಾರ್ ಗೌಡ, ರಮೇಶ್, ಶಿವಕುಮಾರ್, ರಘು, ಇಲವಾಲ ರವಿ ಇತರರು ಉಪಸ್ಥಿತರಿದ್ದರು. (ಎಚ್.ಎನ್, ಎಂ.ಎನ್)

Leave a Reply

comments

Related Articles

error: