ಮೈಸೂರು

ಚಾಕುವಿನಿಂದ ಇರಿದು ವ್ಯಕ್ತಿ ಕೊಲೆ

ಮೈಸೂರು,ಆ.2:- ನಂಜನಗೂಡು ತಾಲೂಕಿನ ಮಾಡ್ರಹಳ್ಳಿ ಗ್ರಾಮದಲ್ಲಿ ವ್ಯಕ್ತಿಯೋರ್ವರನ್ನು ಚಾಕುವಿನಿಂದ  ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ.

ಕೊಲೆಯಾದವರನ್ನು ಮಹದೇವ (44)  ಎಂದು ಗುರುತಿಸಲಾಗಿದೆ.  ಗಲಾಟೆ ವೇಳೆ ತಡೆಯಲು ಹೋಗಿದ್ದ ಇಬ್ಬರು ಸ್ನೇಹಿತರಿಗೂ ಗಂಭೀರ ಗಾಯಗಳಾಗಿವೆ.  ಘಟನೆಗೆ ಸಂಬಂಧಿಸಿದಂತೆ ನಂಜುಂಡ, ಮಹಾದೇವಸ್ವಾಮಿ, ಸೋಮು ಎಂಬವರ ವಿರುದ್ಧ ಆರೋಪ ಕೇಳಿ ಬಂದಿದೆ.  ನಂಜನಗೂಡು ಗ್ರಾಮಾಂತರ ಪೊಲೀಸ್‌ ಠಾಣೆ ಯಲ್ಲಿ ಪ್ರಕರಣ  ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: