ಮೈಸೂರು

ತಿಲಕರ ಆದರ್ಶಗಳನ್ನು ನೆನೆದು ಸ್ವಾವಲಂಬಿ ಭಾರತವನ್ನು ಮತ್ತಷ್ಟು ಸದೃಢಗೊಳಿಸುವತ್ತ ಯುವ ಜನತೆ ಮುಂದಾಗಬೇಕು : ರವೀಂದ್ರ ಜೋಶಿ

ವೀರ ಸಾವರ್ಕರ್ ಯುವ ಬಳಗದಿಂದ ಲೋಕಮಾನ್ಯ ಬಾಲಗಂಗಾಧರ ತಿಲಕರ 100ನೇ ಪುಣ್ಯಸ್ಮರಣೆ

ಮೈಸೂರು,ಆ.2:- ವೀರ ಸಾವರ್ಕರ್ ಯುವ ಬಳಗದಿಂದ ಲೋಕಮಾನ್ಯ ಬಾಲಗಂಗಾಧರ ತಿಲಕರ 100ನೇ ಪುಣ್ಯಸ್ಮರಣೆಯ ಪ್ರಯುಕ್ತ ನಗರದ ತಿಲಕ ನಗರದಲ್ಲಿನ ಬಾಲಗಂಗಾಧರ ತಿಲಕ ಉದ್ಯಾನವನದಲ್ಲಿ ನಿನ್ನೆ  “ಸ್ವರಾಜ್ಯ ಮತ್ತು ಆತ್ಮನಿರ್ಭರ ಭಾರತ” ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಲೋಕಮಾನ್ಯ ತಿಲಕರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಹಿರಿಯ ಪತ್ರಕರ್ತರಾದ ರವೀಂದ್ರ ಜೋಶಿಯವರು ಮಾತನಾಡಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಹು ದೊಡ್ಡ ಪಾತ್ರವನ್ನು ಲಾಲ್ ಬಾಲ್ ಪಾಲ್ ವಹಿಸಿದ್ದರು. ಬಾಲಗಂಗಾಧರ ತಿಲಕರು ಸ್ವರಾಜ್ಯ ನನ್ನ ಜನ್ಮಸಿದ್ದ ಹಕ್ಕು ಎಂದು ಘೋಷಿಸಿ, ಸ್ವದೇಶಿ ಆಂದೋಲನ ಹುಟ್ಟುಹಾಕಿ ವಿದೇಶಿ ವಸ್ತುಗಳನ್ನು ದಹಿಸುವ ಬೃಹತ್ ಆಂದೋಲನ ನಡೆಸಿದ್ದರು. ಸಾಮೂಹಿಕ ಗಣೇಶೋತ್ಸವದ ಮೂಲಕ ಜನರನ್ನು ಸಂಘಟಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆ ನೀಡುತ್ತಿದ್ದರು. ಇಂದು ಅವರ ಹೋರಾಟ ಹಾಗೂ ಆದರ್ಶಗಳನ್ನು ನೆನೆದು ಸ್ವಾವಲಂಬಿ ಭಾರತವನ್ನು ಮತ್ತಷ್ಟು ಸದೃಢಗೊಳಿಸುವತ್ತ ಯುವ ಜನತೆ ಮುಂದಾಗಬೇಕಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೈಸೂರು ಮಹಾನಗರ ಪ್ರಚಾರಕರಾದ ಗುರುದತ್   ಮಾತನಾಡಿ ತಿಲಕರು ಸಾವರ್ಕರ್  ಅವರಿಗೂ ಗುರು ಸ್ಥಾನದಲ್ಲಿದ್ದರು. ಇಂದು ಆತ್ಮನಿರ್ಭರದ ಕಲ್ಪನೆ ಮತ್ತೆ ಜಾಗೃತವಾಗಿದೆ, ಜನಸೇವೆ ಮಾಡಲು ಸಮಯವಿಲ್ಲ ಎನ್ನುವವರು ಗೋವುಗಳ ಉತ್ಪನ್ನಗಳನ್ನು ಹೆಚ್ಚಾಗಿ ಬಳಸಬೇಕು, ಆ ಮೂಲಕವೂ ರೈತರಿಗೆ ಆರ್ಥಿಕವಾಗಿ ಲಾಭವಾಗುವಂತೆ ಮಾಡಬಹುದು. ಪ್ರತಿಯೊಬ್ಬರು ಸ್ವದೇಶಿ ನಿರ್ಮಿತ ವಸ್ತುಗಳನ್ನು ಮಾತ್ರವೇ ಖರೀದಿಸುವ ಪಣ ತೊಡಬೇಕೆಂದು ತಿಳಿಸಿದರು.

ನಗರಪಾಲಿಕೆ ಸದಸ್ಯ ರಂಗಸ್ವಾಮಿಯವರು ತಿಲಕರ ಪ್ರತಿಮೆ ಸ್ಥಾಪಿಸುವ ಇಂಗಿತ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ವೀರ ಸಾವರ್ಕರ್ ಯುವ ಬಳಗದ ಅಧ್ಯಕ್ಷರಾದ ರಾಕೇಶ್ ಭಟ್, ಸಂದೇಶ್ ಪವಾರ್, ವಿಕ್ರಮ್ ಅಯ್ಯಂಗಾರ್, ಟಿ.ಎಸ್.ಅರುಣ್, ಕಾರ್ಯದರ್ಶಿ ಎನ್. ದೀಪಕ್ ರಾಜ್, ಶ್ರೀರಾಮಸೇನೆಯ ಸಂಜಯ್, ಬಳಗದ ಪ್ರಮುಖರಾದ ಎಸ್.ಎನ್.ರಾಜೇಶ್, ಪ್ರಮೋದ್ ಗೌಡ, ಉಮಾಶಂಕರ್, ಚೆನ್ನಬಸವಣ್ಣ, ಚೇತನ್, ಸ್ಥಳೀಯ ಮುಖಂಡರಾದ ರಾಜು, ಚೇತನ್ ಹಾಜರಿದ್ದರು. (ಎಸ್.ಎಚ್)

Leave a Reply

comments

Related Articles

error: