ಮನರಂಜನೆ

ಸಹ ನಟನಿಗೆ ನಟಿ ರವೀನಾ ಟಂಡನ್ ಕಪಾಳ ಮೋಕ್ಷ

90ರ ದಶಕದ ಬಾಲಿವುಡ್ ಬೆಡಗಿ, ನೈಜ ಕಲಾವಿದೆ, ರವೀನಾ ಟಂಡನ್ ತನ್ನ ಕಮ್ ಬ್ಯಾಕ್ ಚಿತ್ರ ‘ಮಾತ್ರ್’ ಚಿತ್ರೀಕರಣದ ವೇಳೆ ಸಹ ಕಲಾವಿದನಿಗೆ ಕಪಾಳ ಮೋಕ್ಷ ಮಾಡುವುದರೊಂದಿಗೆ ಚರ್ಚೆಗೆ ಗ್ರಾಸವಾಗಿದ್ದಾರೆ.
ಚಿತ್ರವೂ ಏಪ್ರಿಲ್ 21ರಂದು ಬಿಡುಗಡೆಗೊಳ್ಳುತ್ತಿದ್ದು ಅದರ ಟೀಸರ್ ಈಗಾಗಲೇ ಸದ್ದು ಮಾಡುತ್ತಿದೆ, ಚಿತ್ರದ ನಿರ್ದೇಶನ ಅಷ್ಟರ್ ಸಾಯಿದ್ ಮಾಡಿದ್ದು, ರವೀನಾ ಟಂಡನ್ ಚಿತ್ರೀಕರಣ ವೇಳೆ ಸಹ ನಟ ಮಧುರ್ ಮಿತ್ತಲ್ ಕೆನ್ನಗೆ ಭಾರಿಸಿದ್ದಾರೆ.
‘ಮಾತ್ರ್’ ಚಿತ್ರದ ಭಾವನಾತ್ಮಕ ಸನ್ನಿವೇಶ ಚಿತ್ರೀಕರಣ ವೇಳೆ ನಿರ್ದೇಶಕ ಅಷ್ಟರ್ ಸಾಯಿದ್ ಸಹ ನಟನಿಗೆ ಕನ್ನೆಗೆ ಭಾರಿಸಲು ಟಂಡನ್ ಅವರಿಗೆ ಹೇಳಿದ್ದರು ಮೊದಲು ಸನ್ನಿವೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು ನಂತರ ಪರಕಾಯ ಪ್ರವೇಶದಂತೆ ಪಾತ್ರ ನಿರ್ವಹಿಸಿ ಸಹ ನಟನಿಗೆ ಸರಿಯಾಗಿಯೇ ಕೆನ್ನೆಗೆ ಹೊಡೆದಿದ್ದಾರೆ. ಅಚಾನಕ್ ಧಾಳಿಯಿಂದ ಸಹನಟ ಮಿತ್ತಲ್ ಆಘಾತಗೊಳಗಿದ್ದರು ಎನ್ನಲಾಗಿದ್ದು ಟಂಡನ್ ಅವರು ಮಧುರ್ ಕೆನ್ನೆಗೆ ಬಲವಾಗಿ ಮೂರು ಬಾರಿ ಭಾರಿಸಿದ್ದಾರೆ, ನಂತರ ಚಿತ್ರದ ತುಣುಕುಗಳನ್ನು ವೀಕ್ಷಿಸಿದಾಗ ನೈಜವಾಗಿ ಮೂಡಿರುವ ಬಗ್ಗೆ ಚಿತ್ರತಂಡವೂ ಸಂತಸ ಹಂಚಿಕೊಂಡಿದೆ.
ಮಾಧಕ ಚೆಲುವಿನಿಂದಲೇ ರವೀನಾ ಟಂಡನ್ ದಶಕಗಳ ಕಾಲ ಬಾಲಿವುಡ್‍ನಲ್ಲಿ ಮೆರೆದಿದ್ದರು ಮದುವೆಯಾಗಿ ತೆರೆ ಮರೆಗೆ ಸರಿದಿದ್ದರು. ಕಿರುತೆರೆಯಲ್ಲಿ ಹಲವಾರು ಕಾರ್ಯಕ್ರಮಗಳ ನಿರೂಪಕಿಯಾಗಿ ಕಾಣಿಸಿಕೊಂಡಿದ್ದರು ಬೃಹತ್ ಪರದೆಯಿಂದಲೇ ಅಂತರ ಕಾಯ್ದುಕೊಂಡಿದ್ದ ಅವರು ಈಚೆಗೆ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: