ಮೈಸೂರು

ಮಳೆನೀರು ಚರಂಡಿಯ ಮೇಲ್ಭಾಗಕ್ಕೆ ಕವರಿಂಗ್ ಸ್ಯ್ಲಾಬ್ ಗಾಗಿ 5 ಲಕ್ಷ ರೂಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಮೈಸೂರು,ಆ.3:- ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಗೆ ಬರುವ ವಾರ್ಡ್ ನಂ.48 ರ ಚಿನ್ನಗಿರಿಕೊಪ್ಪಲಿನ ಭಾಗದ 14 A ಮತ್ತು 14B  ಕ್ರಾಸ್ ಗಳಲ್ಲಿ  ಶಾಸಕರ ಅನುದಾನದಿಂದ 10 ಲಕ್ಷ ರೂಗಳಲ್ಲಿ ಒಳಚರಂಡಿ ಕಾಮಗಾರಿ. ಮತ್ತು 5 ನೇ ಮುಖ್ಯರಸ್ತೆಯಲ್ಲಿರುವ ಮಳೆನೀರು ಚರಂಡಿಯ ಮೇಲ್ಭಾಗಕ್ಕೆ ಕವರಿಂಗ್ ಸ್ಯ್ಲಾಬ್ ಗಾಗಿ 5 ಲಕ್ಷ ರೂಗಳ ಅಭಿವೃದ್ಧಿ ಕಾಮಗಾರಿಗೆ   ಶಾಸಕರಾದ ಎಸ್ ಎ ರಾಮದಾಸ್ ಅವರು ಮತ್ತು ಸ್ಥಳೀಯ ನಗರಪಾಲಿಕೆ ಸದಸ್ಯರಾದ ಶೋಭ ಮತ್ತು ಸ್ಥಳೀಯ ಮುಖಂಡರು ಸೇರಿ ಗುದ್ದಲಿಪೂಜೆ ಕಾರ್ಯಕ್ರಮವನ್ನು ನೆರವೇರಿಸಿದರು.

ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಒಳಚರಂಡಿ ಮತ್ತು ಮಳೆನೀರು ಚರಂಡಿಯ ಮೇಲ್ಭಾಗಕ್ಕೆ ಕವರಿಂಗ್ ಸ್ಯ್ಲಾಬ್ ಅಳವಡಿಸಲು ಶಾಸಕರು ಪಾದಯಾತ್ರೆ ಬಂದಾಗ ಸ್ಥಳೀಯರು ಬೇಡಿಕೆಯಿಟ್ಟಿದ್ದರು. ಈ ಕಾಮಗಾರಿಗೆ ಇಂದು ಚಾಲನೆ ನೀಡಿದ್ದು ಸ್ಥಳೀಯ ಸಾರ್ವಜನಿಕರ ಬೇಡಿಕೆ ಇಂದು ಈಡೇರಿದೆ.

ಈ ಕಾರ್ಯಕ್ರಮದಲ್ಲಿ ನಗರಪಾಲಿಕೆ ಸದಸ್ಯರಾದ   ಶೋಭ, ಆಶ್ರಯ ಸಮಿತಿ ಸದಸ್ಯರಾದ   ಗೌರಿ, ಗಿರಿ, ರಾಮ್ ಪ್ರಸಾದ್, ಸೋಮಣ್ಣ, ನಾಗರಾಜು, ಚಿನ್ಮಯ್, ಕೃಷ್ಣ, ಉಮೇಶ್, ಮಹದೇವು, ಪೊಲೀಸ್ ನಿರೀಕ್ಷಕರಾದ ರಾಜು, ವಲಯ ಆಯುಕ್ತರು, ಅಭಿವೃದ್ಧಿ ಅಧಿಕಾರಿ, ವಾರ್ಡ್ ಅಭಿಯಂತರರು, ಆರೋಗ್ಯ ಪರಿವೀಕ್ಷಕರು, ವೈದ್ಯರು, ಕಿರಿಯ ಆರೋಗ್ಯ ಅಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದರು.  (ಜಿ.ಕೆ,ಎಸ್.ಎಚ್)

Leave a Reply

comments

Related Articles

error: