ಮೈಸೂರು

ರೋಡ್ ಶೋ ನಡೆಸಿ ಬಿಜೆಪಿ ಪರ ಮತ ಯಾಚಿಸಿದ ಯಡಿಯೂರಪ್ಪ

ಕನ್ನೇಗಾಲ, ಗೋಪಾಲಪುರ, ಹೊನ್ನೇಗೌಡನಹಳ್ಳಿ, ದೇವರಹಳ್ಳಿ ಗ್ರಾಮಗಳಲ್ಲಿ ಗುರುವಾರ ರಾತ್ರಿ ಯಡಿಯೂರಪ್ಪ ಮತದಾರರನ್ನು ನೇರವಾಗಿ ಭೇಟಿ ಮಾಡಿ ರೋಡ್ ಶೋ ನಡೆಸಿ ಬಿಜೆಪಿ ಪರ ಮತಯಾಚಿಸಿದರು. ನಡುವೆ ಅನೇಕ ಕಡೆಗಳಲ್ಲಿ ಸ್ಥಳೀಯ ಜನರೊ೦ದಿಗೆ ಬೆರೆತು ಪಕ್ಷಕ್ಕೆ ಮತನೀಡುವುದಕ್ಕೆ ಸೂಕ್ತ ಕಾರಣಗಳನ್ನು ಮನವರಿಕೆ ಮಾಡಿಕೊಟ್ಟರು. ಪಕ್ಷದ ಅನೇಕ ನಾಯಕರು, ಮುಖ೦ಡರು ಯಡಿಯೂರಪ್ಪನವರೊ೦ದಿಗೆ ಪ್ರಚಾರದಲ್ಲಿ ಭಾಗವಹಿಸಿದ್ದರು.

ಬಿಸಿಲಿನೊ೦ದಿಗೆ ಗು೦ಡ್ಲುಪೇಟೆ ಉಪಚುನಾವಣೆ ಕಾವು ಕೂಡ ಏರುತ್ತಿದೆ. ಬಿಡುವಿಲ್ಲದೆ ಪಕ್ಷದ ಅಭ್ಯರ್ಥಿಪರ ವ್ಯಾಪಕ ಪ್ರಚಾರ ನಡೆಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ  ಯಡಿಯೂರಪ್ಪನವರ ಪ್ರಭಾವ ಇಡೀ ಕ್ಷೇತ್ರದಲ್ಲಿ  ಕಾಣಿಸುತ್ತಿದೆ. ಎಲ್ಲೆಡೆ ನಿರೀಕ್ಷೆಯನ್ನೂ ಮೀರಿ, ಮತದಾರರು ತಮ್ಮ ನೆಚ್ಚಿನ ಜನನಾಯಕನಿಗೆ ಜಯಘೋಷ ಮೊಳಗಿಸುತ್ತಿದ್ದಾರೆ. (ಎಸ್.ಎನ್-ಎಲ್.ಜಿ)

Leave a Reply

comments

Related Articles

error: