ಮೈಸೂರು

ನೀತಿ ಸಂಹಿತೆ ಉಲ್ಲಂಘನೆ: ರಾಮದಾಸ್ ವಿರುದ್ಧ ದೂರು ದಾಖಲು

ನಿಷೇಧಾಜ್ಞೆ ಉಲ್ಲಂಘಿಸಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ್ದ ಮಾಜಿ  ಸಚಿವ ಎಸ್.ಎ.ರಾಮದಾಸ್ ಸಹಿತ ಐವರು ಬಿಜೆಪಿ ಮುಖಂಡರ ವಿರುದ್ಧ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ರಾಮದಾಸ್ ಅವರ ಜತೆ ನಗರ ಪಾಲಿಕೆ ಸದಸ್ಯರಾದ ವಿದ್ಯಾ ಅರಸ್ ಮತ್ತು ಸಾಗರ್ ನಿಷೇಧಾಜ್ಞೆ ಉಲ್ಲಂಘಿಸಿ ಲಕ್ಷ್ಮೀಪುರಂನ ಜೆಎಸ್ಎಸ್ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಪೆನ್ನು, ಪುಸ್ತಕ ಹಂಚಿದ್ದಾರೆ ಎಂದು ಆರೋಪಿಸಿ, ಎನ್ ಎಸ್ ಯು ಐ  ಮುಖಂಡ ನಾಗೇಶ್ ಕರಿಯಪ್ಪ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ವಿಚಾರಣೆ ನಡೆಸಿದ್ದಾರೆ.(ಎಲ್.ಜಿ)

 

Leave a Reply

comments

Related Articles

error: