ಮನರಂಜನೆ

ಕೋಸ್ಟಲ್ ವುಡ್‍ ಕ್ರಿಕೆಟ್‍ ಪಂದ್ಯಾವಳಿ : ಸ್ಯಾಂಡಲ್ ವುಡ್‍ ತಾರೆಯರ ಸಮಾಗಮ

ತುಳು ಚಿತ್ರರಂಗದ ಇತಿಹಾಸದಲ್ಲಿಯೇ ಹೊಸ ತರಂಗದ ಅಲೆಯೊಂದು ಆರಂಭವಾಗುತ್ತಿದ್ದು ಚಿತ್ರರಂಗದ ಶ್ರೇಯೋಭಿವೃದ್ಧಿಗಾಗಿ ‘ಕೋಸ್ಟಲ್ ವುಡ್ ಪ್ರೀಮಿಯರ್ ಲೀಗ್’ (CPL) ಕ್ರಿಕೆಟ್‍ ಪಂದ್ಯಾವಳಿಯನ್ನು ಆಯೋಜಿಸಿದೆ.

ಸಿಪಿಎಲ್ ಪಂದ್ಯಾವಳಿಯೂ ಇದೇ ಏಪ್ರಿಲ್ 4 ರಿಂದ 8ರವರೆಗೆ ಮಂಗಳೂರಿನ ನೆಹರೂ ಮೈದಾನದಲ್ಲಿ ಕೋಸ್ಟಲ್ ವುಡ್‍ ಕಲಾವಿದರು ಹಾಗೂ ತಂತ್ರಜ್ಞರ ಎಂಟು ತಂಡಗಳು ಅಖಾಡಕ್ಕೀಳಿದು ಬಲಾಬಲವನ್ನು ಪ್ರದರ್ಶಿಸಲಿವೆ.

ತುಳು ಚಿತ್ರ ಕಲಾವಿದರು ಹಾಗೂ ತಂತ್ರಜ್ಞರು ಸೇರಿ “ಕೋಸ್ಟಲ್ ವುಡ್ ಆರ್ಟಿಸ್ಟ್‍ ಅ್ಯಂಡ್‍ ಟೆಕ್ನಿಷಿಯನ್ಸ್ ಕಲ್ಚರಲ್ ಅಸೋಸಿಯೇಷನ್ ಮಂಗಳೂರು” (CATCA) ತಂಡವನ್ನು ರಚಿಸಿಕೊಂಡಿವೆ.

ಎಂಟು ತಂಡಗಳಿಗೆ ಸ್ಟಾರ್‍ ಕಲಾವಿದರ ಆಟಗಾರರಾದ ಅರ್ಜುನ್ ಕಾಪಿಕಾಡ್‍, ರೂಪೇಶ್ ಶೆಟ್ಟಿ, ಸೌರಭ್ ಭಂಡಾರಿ, ಶ್ರವಣ್ ಕುಮಾರ್ ಕದ್ರಿ, ಪ್ರಕಾಶ್ ಧರ್ಮನಗರ, ಅನೂಪ್‍ ಸಾಗರ್, ಪೃಥ್ವಿ ಅಂಬರ್‍ ಹಾಗೂ ಅಸ್ತಿಕ್ ಶೆಟ್ಟಿ ತಂಡಗಳನ್ನು ಮುನ್ನಡೆಸಿ ಶಕ್ತಿ ಪ್ರದರ್ಶಿಸಲಿದ್ದಾರೆ,

ಕ್ರಿಕೆಟ್ ಪಂದ್ಯಾವಳಿಗೆ ತಾರಾ ಮೆರುಗು ನೀಡಲು ಸ್ಯಾಂಡಲ್‍ವುಡ್‍ ಸ್ಟಾರ್‍ಗಳಾದ ರಾಕಿಂಗ್ ಸ್ಟಾರ್‍ ಯಶ್, ಹ್ಯಾಟ್ರಿಕ್ ಹೀರೋ ಶಿವರಾಜ್‍ ಕುಮಾರ್, ಕಡಲತಡಿಯ ಕುವರ ರಕ್ಷಿತ್ ಶೆಟ್ಟಿ ಹಾಗೂ ಶ್ರೀನಗರ ಕಿಟ್ಟಿ ಆಗಮಿಸಿ ಆಟಗಾರರನ್ನು ಹುರಿದುಂಬಿಸಲಿದ್ದಾರೆ.

ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ಕ್ರೀಡಾಕೂಟ ಜರುಗಲಿದ್ದು ಇದರೊಂದಿಗೆ ಸ್ಯಾಂಡಲ್‍ ವುಡ್‍ನ ಖ್ಯಾತನಾಮರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಪ್ರೇಕ್ಷಕರಿಗೆ ಕ್ರೀಡೆಯೊಂದಿಗೆ ಭರಪೂರ ಮನರಂಜನೆಯ ರಸದೌತಣವು ಲಭಿಸಲಿದೆ. (ಕೆ.ಎಂ.ಆರ್)

Leave a Reply

comments

Related Articles

error: