ಮೈಸೂರು

ಇಂದು ಮತ್ತು ನಾಳೆ ಸಿದ್ದರಾಮಯ್ಯ ಚುನಾವಣಾ ಪ್ರಚಾರ

ಇಂದಿನಿಂದ ನಂಜನಗುಡು ಮತ್ತು ಗುಂಡ್ಲುಪೇಟೆಯಲ್ಲಿ ಸಿಎಂ ಸಿದ್ದರಾಮಯ್ಯ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಇಂದು ನಂಜನಗೂಡು ಹಾಗೂ ನಾಳೆ ಗುಂಡ್ಲುಪೇಟೆಯಲ್ಲಿ ಪ್ರಚಾರ ಮಾಡುತ್ತೇನೆ ಎಂದು ಅವರು ತಿಳಿಸಿದರು.

ಎಲ್ಲಾ  ಸಚಿವರು ಪ್ರಚಾರಕ್ಕೆ ಬರುತ್ತಿಲ್ಲ. ಕೆಲ ಸಚಿವರು ಬರ ಹಾಗೂ ಕುಡಿಯುವ ನೀರಿನ ಸಮಸ್ಯೆಗೆ ಬಗ್ಗೆ ಕೆಲಸ ಮಾಡುತ್ತಿದ್ದಾರೆ. ನಾನು ಎಂದೂ ಅಧಿಕಾರ ದುರ್ಬಳಕೆ ಮಾಡಿಕೊಂಡು ಚುನಾವಣೆ ಎದುರಿಸಿಲ್ಲ. ಉಪಚುನಾವಣೆಗಳು ಮುಂದಿನ ದಿಕ್ಸೂಚಿ ಆಗುವುದಿಲ್ಲ. ಆದರೆ ನಮ್ಮ ಅಭಿವೃದ್ಧಿ ಕುರಿತು ಜನರ ಅಭಿಪ್ರಾಯ ತಿಳಿದುಕೊಳ್ಳಬಹುದು. ಈ ಉಪಚುನಾವಣೆಯಲ್ಲಿ ಅದು ನಮಗೆ ತಿಳಿಯಲಿದೆ ಎಂದು ಹೇಳಿದರು.

ಶ್ರೀನಿವಾಸ್ ಪ್ರಸಾದ್ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ

ದಲಿತರನ್ನು ಸಿಎಂ ಸಿದ್ದರಾಮಯ್ಯ ಮುಗಿಸುತ್ತಿದ್ದಾರೆ ಎಂಬ ಶ್ರೀನಿವಾಸ್ ಪ್ರಸಾದ್ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ,  ಮಹದೇವಪ್ಪ, ಪರಮೇಶ್ವರ್, ಆಂಜನೇಯ, ಮಲ್ಲಿಕಾರ್ಜುನ ಖರ್ಗೆ ದಲಿತರಲ್ಲವೇ? ಅವರೆಲ್ಲಾ ದಲಿತ ನಾಯಕರಲ್ಲವೇ? ಪ್ರಸಾದ್ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಈ ಉಪಚುನಾವಣೆಯಲ್ಲಿ ಪ್ರತಿಷ್ಠೆಯ ಮಾತು ಬರುವುದಿಲ್ಲ. ಜನ ಅಭಿವೃದ್ಧಿ ನೋಡಿ ಮತ ಹಾಕುತ್ತಾರೆ ಎಂದು ಹೇಳಿದರು.

ಚುನಾವಣೆಯ ಸಂದರ್ಭದಲ್ಲಿ ಆರೋಪ ಪ್ರತ್ಯಾರೋಪಗಳು ಬರುವುದು ಸಹಜ. ಆ ಹೇಳಿಕೆಗಳಿಗೆ ಮಹತ್ವ ಇಲ್ಲ. ಆದರೆ ಜನರು ಈ ಹೇಳಿಕೆಗಳನ್ನು ಗಮನಿಸುತ್ತಾರೆ ಎಂದರು. (ಎಸ್.ಎನ್-ಎಲ್.ಜಿ)

Leave a Reply

comments

Related Articles

error: