ದೇಶಪ್ರಮುಖ ಸುದ್ದಿ

ಶ್ರೀ ರಾಮಮಂದಿರ ರಾಮರಾಜ್ಯದ ಆದರ್ಶಗಳಿಗೆ ಸಾಕ್ಷಿ, ಆಧುನಿಕ ಭಾರತದ ಸಂಕೇತ: ರಾಷ್ಟ್ರಪತಿ ರಾಮನಾಥ್ ಕೋವಿಂದ್

ನವದೆಹಲಿ,ಆ.5-ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ದೇಗುಲ ನಿರ್ಮಾಣ ಕಾರ್ಯಕ್ಕೆ ಪ್ರಧಾನಿ ಮೋದಿ ಭೂಮಿ ಪೂಜೆ ನೆರವೇರಿಸಿದ್ದಾರೆ. ಭೂಮಿ ಪೂಜೆ ನೆರವೇರಿದ ಬಳಿಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್ ಮಾಡಿ ಕೇಂದ್ರ ಸರ್ಕಾರವನ್ನು ಅಭಿನಂದಿಸಿದ್ದಾರೆ.

ಟ್ವೀಟ್ ಮಾಡಿರುವ ರಾಮನಾಥ್ ಕೋವಿಂದ್ ಅವರು, ರಾಮಮಂದಿರ ಭವ್ಯ ದೇಗುಲ ನಿರ್ಮಾಣದ ಮಾಡಿದ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ತಿಳಿಸುತ್ತೇನೆ. ರಾಮಮಂದಿರ ಭವ್ಯ ದೇಗುಲವು ರಾಮರಾಜ್ಯದ ಆದರ್ಶಗಳನ್ನು ಆಧರಿಸಿ ಆಧುನಿಕ ಭಾರತದ ಸಂಕೇತವಾಗಲಿದೆ ಎಂದು ನಾನು ನಂಬುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಅಯೋಧ್ಯೆಯ ರಾಮ ದೇವಾಲಯದ ಅಡಿಪಾಯ ಹಾಕಿದ್ದಕ್ಕಾಗಿ ಎಲ್ಲರಿಗೂ ಶುಭಾಶಯಗಳು. ಭವ್ಯ ದೇಗುಲ ಕಾನೂನಿನಡಿಯಲ್ಲೇ ನಿರ್ಮಿಸಲಾಗುತ್ತಿರುವುದರಿಂದ, ಇದು ಭಾರತದ ಸಾಮಾಜಿಕ ಸಾಮರಸ್ಯ ಮತ್ತು ಜನರ ಉತ್ಸಾಹವನ್ನು ವ್ಯಾಖ್ಯಾನಿಸುತ್ತದೆ. ಇದು ರಾಮರಾಜ್ಯದ ಆದರ್ಶಗಳಿಗೆ ಸಾಕ್ಷಿಯಾಗಲಿದೆ ಮತ್ತು ಆಧುನಿಕ ಭಾರತದ ಸಂಕೇತವಾಗಲಿದೆ ಎಂದು ಕೋವಿಂದ್ ಹೇಳಿದ್ದಾರೆ. (ಎಂ.ಎನ್)

Leave a Reply

comments

Related Articles

error: