ಮೈಸೂರು

ಮಾಜಿ ಸಿಎಂ ಸಿದ್ದರಾಮಯ್ಯವರು ಶೀಘ್ರಗುಣಮುಖರಾಗಲೆಂದು ಪ್ರಾರ್ಥಿಸಿ ವಿಶೇಷ ಪೂಜೆ

ಮೈಸೂರು,ಆ.6:-  ಮೈಸೂರು ಪೌರಕಾರ್ಮಿಕರು ಹಾಗೂ ಮಾಜಿ ಶಾಸಕ ಎಂ ಕೆ ಸೋಮಶೇಖರ್ ಅಭಿಮಾನಿಗಳು ಮಾಜಿ ಸಿಎಂ ಸಿದ್ದರಾಮಯ್ಯನವರು ಶೀಘ್ರ ಗುಣಮುಖರಾಗುವಂತೆ ಪ್ರಾರ್ಥಿಸಿ ಇಂದು ಅಗ್ರಹಾರದಲ್ಲಿರುವ ನೂರೊಂದು ಗಣಪತಿ ದೇವಸ್ಥಾನದಲ್ಲಿ  101 ಇಡುಗಾಯಿ ಒಡೆದು  ವಿಶೇಷ ಪೂಜೆ ಸಲ್ಲಿಸಿದರು.
ನಾಡು ಕಂಡ ಧೀಮಂತ ರಾಜಕರಣಿ, ಮಾಜಿ ಮುಖ್ಯಮಂತ್ರಿ,ವಿರೋಧಪಕ್ಷದ ನಾಯಕರಾದ   ಸಿದ್ದರಾಮಯ್ಯನವರು ಕೊರೋನಾ ವೈರಸ್ ಸೋಂಕಿಗೆ ಒಳಗಾಗಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು   ಶೀಘ್ರವಾಗಿ ಗುಣಮುಖರಾಗಲೆಂದು ಹಾರೈಸಿ    ನಾಗರತ್ನ ಮಂಜುನಾಥ್ ವಿಶೇಷ ಅಭಿಷೇಕ ಮಾಡಿಸಿದರು. ಈ ಸಂದರ್ಭದಲ್ಲಿ ಮಾಜಿ ಸದಸ್ಯ ಶಿವಣ್ಣ,ಕಾಂಗ್ರೆಸ್ ಯುವಮುಖಂಡ ಪಳನಿ ಹಾಗೂ ಪೌರಕಾರ್ಮಿಕ ಮುಖಂಡರು, ಯುವಕರು ಪಾಲ್ಗೊಂಡಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: