ಮನರಂಜನೆ

‘ಕಾಂಟ್ರಾಕ್ಟ್’ ಚಿತ್ರದ ಮೂಲಕ ರಾಧಿಕಾ ಕುಮಾರಸ್ವಾಮಿ ಚಿತ್ರರಂಗಕ್ಕೆ ರೀ ಎಂಟ್ರಿ

ಬಣ್ಣದ ಲೋಕದ ಗೀಳು ಬಿಡುವುದು ಅಷ್ಟೊಂದು ಸುಲಭವಲ್ಲ ಎನ್ನುವುದಕ್ಕೆ ರಾಧಿಕಾ ಕುಮಾರಸ್ವಾಮಿ ಸ್ಪಷ್ಟ ನಿದರ್ಶನ.

ಚತುರ್ ಭಾಷಾ ನಟಿ ರಾಧಿಕಾ ಕುಮಾರಸ್ವಾಮಿ ಮತ್ತೊಮ್ಮೆ ತೆರೆ ಮೇಲೆ ನಾಯಕಿಯಾಗಿ ಮಿಂಚಲು ಸಿದ್ಧರಾಗಿದ್ದು ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಏಕಕಾಲದಲ್ಲಿ ತಯಾರಾಗುತ್ತಿರುವ ‘ಕಾಂಟ್ರಾಕ್ಟ್’ ಅಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ಹಿರಿಯ ನಟ ಅರ್ಜುನ್ ಸರ್ಜಾ ನಾಯಕ ನಟನಾಗಿದ್ದು ಪ್ರಬುದ್ಧ ನಟ ಜೆಡಿ ಚಕ್ರವರ್ತಿ ಖಳನಟನಾಗಿದ್ದಾರೆ, ಚಿತ್ರವೂ ಸಾಹಸಮಯ ಹಾಗೂ ಆಕ್ಷನ್ ಸಿನಿಮಾವಾಗಿದೆ. ಚಾಲನೆಗೊಂಡು ಚಿತ್ರೀಕರಣಗೊಳ್ಳದೇ ಸ್ಥಗಿತಗೊಂಡಿತ್ತು. ಚಿತ್ರಕ್ಕೆ ಮರುಚಾಲನೆ ನೀಡಲಾಗಿದೆ.

ಮೊದಲು ಚಿತ್ರದಲ್ಲಿ ಮನಿಷಾ ಲಾಂಬಾ ಅವರು ನಾಯಕಿಯಾಗಿ ಅಭಿನಯಿಸಿದ ದೃಷ್ಯಗಳನ್ನು ಕೈಬಿಟ್ಟು ರಾಧಿಕಾರೊಂದಿಗೆ ಮರುಚಿತ್ರೀಕರಣ ನಡೆಸಿ ಜೋಡಿಸುವ ಕೈಂಕರ್ಯದಲ್ಲಿ ಚಿತ್ರತಂಡವೂ ಬ್ಯೂಸಿಯಾಗಿದೆ. ಚಿತ್ರವನ್ನು ಎಸ್.ಎಸ್.ಸಮೀರ್‍ ನಿರ್ದೇಶಿಸಿ, ನಿರ್ಮಾಣ ಮಾಡುತ್ತಿದ್ದಾರೆ, ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು ತಾರಾಗಣದಲ್ಲಿ ಹೊಸಬರಿಗೆ ಮಣೆಯಾಕಲಾಗಿದೆ.

ಚಿತ್ರರಂಗದ ಮರು ಪ್ರವೇಶಕ್ಕೆ ರಾಧಿಕಾ ಕುಮಾರಸ್ವಾಮಿ ಹರ್ಷ ವ್ಯಕ್ತಪಡಿಸಿದ್ದು, ವೈಯಕ್ತಿಕ ಕಾರಣಗಳಿಂದ ಹಾಗೂ ಸಿನಿಮಾದ ಪೂರ್ವ ಸಿದ್ಧತೆ ಹಿನ್ನಲೆಯಲ್ಲಿ ಚಿತ್ರರಂಗದಿಂದ ದೂರ ಉಳಿದಿದ್ದೆ, ಕಾಂಟ್ರಾಕ್ಟ್‍’ ಚಿತ್ರದ ಮೂಲಕ ಮರು ಪ್ರವೇಶ ಮಾಡುತ್ತಿರುವುದು ಸಂತಸ ನೀಡಿದೆ, ಆದರಲ್ಲಿಯೂ ಸ್ಟಾರ್ ನಟರಾದ ಅರ್ಜುನ್ ಸರ್ಜಾ ಹಾಗೂ ಜೆಡಿಯೂ ಯೊಂದಿಗೆ ಅಭಿನಯಿಸುತ್ತಿರುವುದು ಮರು ಆಗಮನಕ್ಕೆ ಗಂಭೀರತೆ ಬಂದಿದೆ ಎಂದಿದ್ದಾರೆ.

2015ರಲ್ಲಿ ತೆರೆಕಂಡ ರುದ್ರತಾಂಡವ ಚಿತ್ರದ ನಂತರ ಚಿತ್ರರಂಗದಿಂದ ದೂರವುಳಿದಿದ್ದ ರಾಧಿಕಾ ಹಲವಾರು ಗಾಸಿಪ್‍ಗಳಿಗೆ ಆಹಾರವಾಗಿದ್ದರು. (ಕೆ.ಎಂ.ಆರ್)

Leave a Reply

comments

Related Articles

error: