ಮೈಸೂರು

ಕುಂಚಿಟಿಗರ ವಧು ವರರ ಮಾಹಿತಿ ಕೇಂದ್ರದ ವತಿಯಿಂದ ಶಿರಾ ಕ್ಷೇತ್ರದ ಶಾಸಕ ಬಿ. ಸತ್ಯ ನಾರಾಯಣರಿಗೆ ಶ್ರದ್ಧಾಂಜಲಿ

ಮೈಸೂರು,ಆ.6:- ಕುಂಚಿಟಿಗರ ವಧು ವರರ ಮಾಹಿತಿ ಕೇಂದ್ರದ ವತಿಯಿಂದ ಕೆಆರ್ ಮೊಹಲಾ ತೊಗರಿ ಬೀದಿ ಯಲ್ಲಿರುವ ಕುಂಚಿಟಿಗರ ವಧು ವರರ ಮಾಹಿತಿ ಕೇಂದ್ರದ ಕಚೇರಿ ಆವರಣದಲ್ಲಿಂದು ಮೈಸೂರಿನಲ್ಲಿ ಕುಂಚಿಟಿಗರು ಹೆಚ್ಚಾಗಿ ವಾಸಿಸುವ ತೋಗರಿಬೀದಿಯಲ್ಲಿ  ನಿನ್ನೆ ನಿಧನರಾದ  ಶಿರಾ ಕ್ಷೇತ್ರದ ಶಾಸಕರಾದ ಬಿ. ಸತ್ಯ ನಾರಾಯಣ ಅವರಿಗೆ ಶ್ರಂದಾಜಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ  ರಾಜ್ಯ ಕುಂಚಿಟಿಗರ ಸಂಘದ ಉಪಾಧ್ಯಕ್ಷ ಮತ್ತು ಮೈಸೂರು ಕುಂಚಿಟಿಗರ ಸಂಘದ ಖಜಾಂಚಿ ಪ್ರದೀಪ್ ಕುಮಾರ್  ಮಾತನಾಡಿ  ಸಚಿವರಾಗಿ ಹಾಲಿ ಶಾಸಕರಾಗಿ ಶಿರಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದ ಇವರ ಸಾವು ಕ್ಷೇತ್ರದ ಜನರಿಗೆ ಮತ್ತು ಕುಟುಂಬವರ್ಗಕ್ಕೆ ತುಂಬಲಾರದ ನಷ್ಟವನ್ನು ಉಂಟು ಮಾಡಿದೆ.   ಕುಂಚಿಟಿಗ ಸಮಾಜದ ಹಿರಿಯರಾದ ಇವರ ಸಾವು ಸಮಾಜದ ಏಳಿಗೆಗೂ  ಅಪಾರವಾದ ನಷ್ಟವನ್ನುಂಟು ಮಾಡಿದೆ.  ಇವರ ಆತ್ಮಕ್ಕೆ ಶಾಂತಿ ಸಿಗಲಿ.  ಅವರ ಕುಟುಂಬಕ್ಕೆ ಭಗವಂತ  ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮೈಸೂರು ಕುಂಚಿಟಿಗರ ಸಂಘದ ಉಪಾಧ್ಯಕ್ಷ ಸಿ.ಕೆ.ಗಣೇಶ್ .ವಿಕ್ರಮ್ ಮಹದೇವ್.ಕುಂಚಿಟಿಗರ ವಧು ವರರ ಮಾಹಿತಿ ಕೇಂದ್ರದ ವಿ ರವಿ. ಕುಂಚಿಟಿಗರ ಸಂಘದ  ನಿರ್ದೇಶಕರಾದ .ಬಿ.ಗಿರೀಶ್. ದೀಪಕ್. ಎಂ ಕೆ.ರವೀಶ ಜನಾಂಗದ ಹಿರಿಯರಾದ ಸುರೇಶ್ ಮತ್ತು ಪುರುಷೋತ್ತಮ ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: