ಮೈಸೂರು

6 ನೇ ವೇತನ ಆಯೋಗದಿಂದ ಸರ್ಕಾರಿ ನೌಕರರಿಗೆ ಅನ್ಯಾಯ ಆಗುತ್ತಿದೆ: ಡಾ.ಜೆ.ಜಿ.ವಿಶ್ವನಾಥಯ್ಯ ಆರೋಪ

ಸರ್ಕಾರಿ ನೌಕರರಿಗೆ ಸರ್ಕಾರದ 6 ನೇ ವೇತನ ಆಯೋಗದಿಂದ ಅನ್ಯಾಯವಾಗುತ್ತಿದೆ.ಸಿ.ಎಂ. ಸಿದ್ದರಾಮಯ್ಯನವರು ಹಾಗೂ ಜಂಟಿ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರೂ ಪತ್ರಕ್ಕೆ ಸ್ಪಂದಿಸದೆ ನಿರಾಕರಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ಗೌರವ ರಾಜ್ಯಾಧ್ಯಕ್ಷ ಡಾ.ಜೆ.ಜಿ.ವಿಶ್ವನಾಥಯ್ಯ ಆರೋಪಿಸಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು 2011 ರಿಂದ 2012 ರ ಅವಧಿಯಲ್ಲಿ ಸರ್ಕಾರಕ್ಕೆ ಸುದೀರ್ಘ ಸೇವೆ ಸಲ್ಲಿಸಿದ ಎಲ್ಲಾ ವರ್ಗದ ನಿವೃತ್ತ ಸರ್ಕಾರಿ ನೌಕರರು ನಮ್ಮ ಸಂಘದಲ್ಲಿ ಇದ್ದಾರೆ. ಇವರಲ್ಲಿ ಹೆಚ್ಚಿನವರು ಆರ್ಥಿಕವಾಗಿ ದುರ್ಬಲರಾಗಿದ್ದಾರೆ. ಈ ಹಿಂದೆ 5 ನೇ ವೇತನ ಆಯೋಗವು ಪರಿಷ್ಕೃತ ವೇತನ ಶ್ರೇಣಿಯನ್ನು ಜಾರಿಗೆ ಕೊಡುವುದು ತಡವಾದ ಪ್ರಯುಕ್ತ ತನ್ನ ಎಲ್ಲಾ ಸರ್ಕಾರಿ ನೌಕರರಿಗೆ ಮಧ್ಯಂತರ ಪರಿಹಾರ ನೀಡಿತ್ತು. ಹಾಗೆಯೇ ಹೊಸ ವೇತನ ನೀತಿಯನ್ನು,  ಈ ಹಿಂದೆ ನೀಡಿದ್ದ ಮಧ್ಯಂತರ ಪರಿಹಾರ ಕೊಟ್ಟ ದಿನದಿಂದ ಜಾರಿಗೊಳಿಸಿ ಆದೇಶ ನೀಡಿ ಎಲ್ಲರಿಗೂ ಎಲ್ಲಾ ರೀತಿಯ ಆರ್ಥಿಕ ಸೌಲಭ್ಯವನ್ನು ಕೊಟ್ಟಿತ್ತು.ಇದೇ ಹಾದಿಯಲ್ಲಿ 6 ನೇ  ವೇತನ ಆಯೋಗವು ರಾಜ್ಯ ಸರ್ಕಾರಿ ನೌಕರರಿಗೆ ಹೊಸ ವೇತನ ನೀತಿಯನ್ನು ಜಾರಿಗೊಳಿಸುವುದು ತಡವಾದ ಹಿನ್ನಲೆಯಲ್ಲಿ 2011- 2012 ವರಗೆ ಮಧ್ಯಂತರ ಪರಿಹಾರ ವನ್ನು ಶೇ.15% ನೀಡಿ ಆದೇಶ ಕೊಟ್ಟಿತ್ತು.  ಈ ಮಧ್ಯಂತರ ಪರಿಹಾರವನ್ನು ಹೊಸ ವೇತನ ನೀತಿಯಲ್ಲಿ ವಿಲೀನಗೊಳಿಸಿ, ನೌಕರರು ಪಡೆಯುವ ನಿವೃತ್ತಿ ಪಿಂಚಣಿಯಲ್ಲಿ ಸೇರಿಸಿ ಪಿಂಚಣಿಯನ್ನು ಮಾತ್ರ ಪರಿಷ್ಕರಿಸಿದೆ. ಆದರೆ ನೌಕರರು ಪಡೆಯುವ ಇತರೆ ಆರ್ಥಿಕ ಸೌಲಭ್ಯಗಳಾದ DCRG  ಹಾಗೂ Commutation ನನ್ನು 5 ನೇ ವೇತನ ಆಯೋಗದಲ್ಲಿದ್ದಂತೆಯೇ ಮುಂದುವರಿಸಲಾಗಿದೆ. ಈ ಸೌಲಭ್ಯ ಗಳನ್ನು ಹೊಸ 6 ನೇ ವೇತನ ನೀತಿಯಂತೆ ಕೊಟ್ಟಿಲ್ಲ. ಇದರಿಂದ ಎಲ್ಲಾ ನೌಕರ ವರ್ಗಕ್ಕೆ ಅನ್ಯಾಯವಾಗಿದೆ. ಸೌಲಭ್ಯದ ಹಣವನ್ನು ಸರ್ಕಾರದ ಹಣವನ್ನು ಸರ್ಕಾರದ ನೀತಿಯಂತೆ ಪ್ರತಿ ಮಾಯೆಯಲ್ಲಿ ಪ್ರತಿ ನೌಕರನಿಂದ ಅವರವರ ವೇತನದಲ್ಲಿ ಕಟಾವು ಮಾಡಿ ತನ್ನ ಬೊಕ್ಕಸವನ್ನು ಮರು ತುಂಬಿಸಿಕೊಳ್ಳಲು ಕಡ್ಡಾಯ ಅವಕಾಶ ಇದೆ. ಸಿ.ಎಂ. ಸಿದ್ದರಾಮಯ್ಯನವರು ಹಾಗೂ ಜಂಟಿ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರೂ ಪತ್ರಕ್ಕೆ ಸ್ಪಂದಿಸದೆ ನಿರಾಕರಿಸಿದ್ದಾರೆ.  ನಮ್ಮ ಪತ್ರಕ್ಕೆ ಸ್ಪಂದಿಸಿ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷ ಚಂದ್ರಶೇಖರ್ ಶಿವಮೊಗ್ಗ, ಕಾರ್ಯದರ್ಶಿ ವಿ.ಶಾಂತರಾಜು ಕೆಂಪ್ಪಯ್ಯ, ಮತ್ತಿತರರು ಹಾಜರಿದ್ದರು. (ಕೆ.ಎಸ್-ಎಲ್.ಜಿ)

Leave a Reply

comments

Related Articles

error: