ಪ್ರಮುಖ ಸುದ್ದಿ

ಸರಣಿ  ಕಳ್ಳತನ ಮಾಡಿದ್ದ ಕಳ್ಳರ ಬಂಧನ : 10.56 ಲಕ್ಷ ಮೌಲ್ಯದ ವಸ್ತುಗಳ ವಶ

ರಾಜ್ಯ(ಚಾಮರಾಜನಗರ), ಆ.7:- ಜುಲೈ 23 ರಾತ್ರಿ 5 ಮನೆಯಲ್ಲಿ ಕಳ್ಳತನ ಮಾಡಿ ಕೊಳ್ಳೇಗಾಲವನ್ನೇ ಬೆಚ್ಚಿಬೀಳಿಸಿದ್ದ ಖತರ್ನಾಕ್ ಖದೀಮರನ್ನು ಬಂಧಿಸುವಲ್ಲಿ ಕೊಳ್ಳೇಗಾಲ ಪಟ್ಟಣ ಪೊಲೀಸ್ ಯಶಸ್ವಿಯಾಗಿದ್ದಾರೆ. ಇವರಿಂದ ಒಟ್ಟು 10.56 ಲಕ್ಷ ಮೌಲ್ಯದ ಕಾರು, ಬೈಕ್,  ಚಿನ್ನಾಭರಣ ವಶಪಡಿಕೊಳ್ಳಲಾಗಿದೆ.

ಪಟ್ಟಣದ ವಿವಿಧೆಡೆ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಖದೀಮರನ್ನು ಕೊಳ್ಳೇಗಾಲ ಪೋಲಿಸರು ಹೆಡೆಮುಡಿಕಟ್ಟಿದ್ದಾರೆ. ಬಂಧಿತರು ಇಲ್ಲಿನ ಶಿವಕುಮಾರ ಸ್ವಾಮಿ ಬಡಾವಣೆ ಹಾಗೂ ಆಶ್ರಯ ಬಡಾವಣೆಯಲ್ಲಿ ಸರಣಿ ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದರು.

ಇಲ್ಲಿನ ಮಂಜುನಾಥ ಬಡವಾಣೆಯ ನಿವಾಸಿ ಶಿವು, ಆಲ್ಕೆರೆ ಅಗ್ರಹಾರ ಗ್ರಾಮದ ನಿಂಗರಾಜು, ರಂಗಸ್ವಾಮಿ ಮತ್ತು ಕುಮಾರ್, ಮದ್ದೂರಿನ  ನಂದಿಶ್ ಬಂಧಿತ ಆರೋಪಿಗಳಾಗಿದ್ದಾರೆ.

ಈ ಪ್ರಕರಣದ ಕಾರ್ಯಚರಣೆಯಲ್ಲಿ ಮೊದಲು ಸಿಕ್ಕಿ ಬಿದ್ದ ಮದ್ದೂರು ಪಟ್ಟಣದ ಮಧು ಅಲಿಯಾಸ್ ಯಾಟೆ ಸದ್ಯ ಜೈಲು ವಾಸದ್ದಲಿದ್ದಾನೆ.

ಈ‌ ಬಗ್ಗೆ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್, ಸರಣಿ ಕಳ್ಳತನ ಮಾಡಿ ಆತಂಕ ಸೃಷ್ಟಿಸಿದ ಖದೀಮರನ್ನು ಬಂಧಿಸುವಲ್ಲಿ ನಮ್ಮ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಒಟ್ಟು 10.56 ಲಕ್ಷ ಮೌಲ್ಯದ ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಇವರು ಮನೆಯಲ್ಲಿ ಯಾರು ಇಲ್ಲದ ಸಮಯನೋಡಿ ಕಳ್ಳತನಕ್ಕೆ ಮುಂದಾಗುತ್ತಿದ್ದರು. ಒಟ್ಟಾರೆ ತಮ್ಮ ಶೋಕಿಗಾಗಿ ಕಳ್ಳತನ ಆಯ್ಕೆ ಮಾಡಿಕೊಂಡಿರುವ ಇವರು ಕುಡಿತ, ಮೋಜು ಮಸ್ತಿಗೆ ಕದ್ದ ಹಣ ವ್ಯಯಮಾಡುತ್ತಿದ್ದರು ಎಂದು ಅವರು ಹೇಳಿದರು.

ಈ ಹಿನ್ನಲೆ ರಾತ್ರಿ ವೇಳೆ ಗಸ್ತು ಕಾರ್ಯಚರಣೆ ವ್ಯವಸ್ಥಿತವಾಗಿದೆ. ಆದರೂ ಈ ರೀತಿ ಪ್ರಕರಣಗಳು ಪಟ್ಟಣದಲ್ಲಿ ನಡೆಯುತ್ತಿರುವುದನ್ನು ಗಭೀರವಾಗಿ ಪರಿಗಣಿಸಿ ರಾತ್ರಿ ಪಾಳಿಯವನ್ನು ಇನ್ನಷ್ಟೂ ಕಠಿಣಗೊಳಿಸಲಾಗುತ್ತದೆ ಎಂದರು. ಜನರು ಯಾವುದೇ ಆತಂಕ ಪಡುವುದು ಬೇಡ, ಒಂದು ವೇಳೆ ಮನೆ ಬಿಟ್ಟು ಹೊರಗೆ ಹೋಗುವವರು ಠಾಣಾ ಪೋಲಿಸರ ಗಮನಕ್ಕೆ ಮಾಹಿತಿ ನೀಡಬೇಕು. ಮನೆಗಳಿಗೆ ಸಿಸಿಟಿವಿ ಅಳವಡಿಕೆ ಆದಾಗ ಮಾತ್ರ ಇಂತಹ ಘಟನೆಗಳಿಗೆ ಕಡಿವಾಣ ಹಾಕಬಹುದಾಗಿದೆ ಎಂದು ಎಸ್ಪಿ ದಿವ್ಯಾ ಸಾರಾಥಾಮಸ್ ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: