ಮೈಸೂರು

ಸುತ್ತೂರು ಸೇತುವೆ ಮೇಲೆ ಹರಿದ ನೀರು : ವಾಹನ ಸಂಚಾರ ನಿರ್ಬಂಧ

ಮೈಸೂರು,ಆ.7:- ಹೆಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯದಿಂದ ಕಬಿನಿ ನದಿಗೆ ಹೆಚ್ಚಿನ ನೀರು ಹರಿಬಿಟ್ಟಿದ್ದರಿಂದ ನಂಜನಗೂಡಿನ ಸುತ್ತೂರು ಸೇತುವೆ ಮುಳುಗಡೆಯಾಗಿದೆ.

ಸುತ್ತೂರು  ಸೇತುವೆಯು ಮುಳುಗಡೆಯಾಗಿದ್ದು, ಸೇತುವೆಯ ಮೇಲೆ ನೀರು ಹರಿಯುತ್ತಿದೆ. ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಕೇರಳದ ವಯನಾಡಿನಲ್ಲಿ  ಭಾರೀ ಮಳೆ ಬೀಳುತ್ತಿದ್ದು  ಇದರಿಂದಾಗಿ ಜಲಾಶಯಕ್ಕೆ 42ಸಾವಿರ ಕ್ಯೂಸೆಕ್ ಗೂ ಅಧಿಕ ನೀರು ಹರಿದು ಬರುತ್ತಿದ್ದು 50ಸಾವಿರ ಕ್ಯೂಸೆಕ್ ಗೂ ಅಧಿಕ ನೀರನ್ನು ನದಿಗೆ ಬಿಡಲಾಗಿದೆ. ಒಳ ಮತ್ತು ಹೊರ ಹರಿವು ಇನ್ನಷ್ಡು ಹೆಚ್ಚುವ ಸಾಧ್ಯತೆ ಇದೆ. ಗುಂಡ್ಲೂ ನದಿಯೂ ತುಂಬಿ ಹರಿಯುತ್ತಿದ್ದು ಹಳ್ಳದಕೇರಿಯ ಹತ್ತಾರು ಬಡಾವಣೆಗೆ ನೀರು ನುಗ್ಗಿದೆ. ಚಾಮರಾಜನಗರ ರಸ್ತೆಯಲ್ಲಿರುವ ಪರಶುರಾಮ ದೇವಾಲಯವು ಭಾಗಶಃ ಮುಳುಗಡೆಯಾಗಿದೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: