ಮೈಸೂರು

ಉಕ್ಕಿ ಹರಿದ ಲಕ್ಷ್ಮಣ ತೀರ್ಥ ನದಿ : ಶುಂಠಿ ಮುಸುಕಿನ ಜೋಳ ಬೆಳೆ ನಾಶ

ಮೈಸೂರು, ಆ.7:- ಮೈಸೂರು ಜಿಲ್ಲೆಯಲ್ಲಿ ಕೊರೋನಾ ಅಬ್ಬರ ಮುಂದುವರಿದಿದ್ದು, ಅದರ ಮಧ್ಯದಲ್ಲಿ ಮಳೆಯ ಅಬ್ಬರವೂ ಮುಂದುವರಿಸಿದೆ.  ಕಾವೇರಿ ಕೊಳ್ಳದಲ್ಲಿ ಮಳೆರಾಯ ಅಬ್ಬರಿಸುತ್ತಿದ್ದು, ಲಕ್ಷ್ಮಣ ತೀರ್ಥ ನದಿ ಉಕ್ಕಿ ಹರಿಯುತ್ತಿದೆ. ಇದರಿಂದ ನದಿಪಾತ್ರದ ರೈತರಿಗೆ ಸಂಕಷ್ಟ ಎದುರಾಗಿದೆ.

ಲಕ್ಷ್ಮಣ ತೀರ್ಥ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಅಲ್ಪ ಸ್ವಲ್ಪ ಬೆಳೆ ಪಡೆಯಲು ಜನ ನೀರಿಗಿಳಿದು ಶುಂಠಿ ಬೆಳೆ ಕಟಾವು ಮಾಡುತ್ತಿದ್ದಾರೆ. ಮತ್ತೊಂದೆಡೆ ಕೊಪ್ಪರಿಗೆಗಳನ್ನು ಬಳಸಿ ಮುಸುಕಿನ ಜೋಳವನ್ನು ರೈತರು ಸಂಗ್ರಹಿಸುತ್ತಿದ್ದಾರೆ.

ಭಾರೀ ಮಳೆಯ ಕಾರಣ  ಲಕ್ಷ್ಮಣ ತೀರ್ಥ ನದಿಯಲ್ಲಿ ಪ್ರವಾಹವುಂಟಾಗಿದ್ದು  ಹುಣಸೂರು ತಾಲೂಕು ಹನಗೋಡು, ಶಿಂಡೇನಹಳ್ಳಿ ವ್ಯಾಪ್ತಿಯಲ್ಲಿ ರೈತರಿಗೆ ಸಂಕಷ್ಟ ಎದುರಾಗಿದ್ದು ಶುಂಠಿ ಹಾಗೂ ಮೆಕ್ಕೆಜೋಳ ಬೆಳೆಗಳು ನಾಶವಾಗಿವೆ. ಕಳೆದ ವರ್ಷವೂ ಈ ಭಾಗದ ಬೆಳೆ ನೆರೆಗೆ ತುತ್ತಾಗಿ ರೈತರಿಗೆ ಅಪಾರ ನಷ್ಟ  ಉಂಟಾಗಿತ್ತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: