ದೇಶ

ರಾಮ ಮಂದಿರ ನಿರ್ಮಾಣ : ಧರ್ಮ ಸಂಸದ್ ನಿರ್ಣಯಕ್ಕೆ ತಲೆ ಬಾಗುವೆವು ಆರ್‍.ಎಸ್.ಎಸ್. ಇಂಗಿತ

ಪಾಟ್ನಾ : ಆಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣದ ಬಗ್ಗೆ ‘ಧರ್ಮ ಸಂಸದ್ ನಿರ್ಣಯ”ಕ್ಕೆ ಆರ್‍.ಎಸ್.ಎಸ್. ತಲೆ ಬಾಗಲಿದ್ದು ಅದರ ಆದೇಶದಂತೆ ಸಂಸ್ಥೆಯು ಮುನ್ನಡಿಯಿಡಲಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಸ್ಥೆ ಮುಖಂಡ ದತ್ತಾತ್ರೇಯ ಹೊಸಬಾಳೆ ತಿಳಿಸಿದ್ದಾರೆ.

ಹಿಂದುಗಳ ಭಾವನಾತ್ಮಕ ವಿಷಯವಾದ ರಾಮಮಂದಿರ ನಿರ್ಮಾಣದ ಬಗ್ಗೆ ಧರ್ಮ ಸಂಸದ್ ಯಾವ ನಿರ್ಣಯ ಕೈಗೆತ್ತಿಕೊಳ್ಳುತ್ತದೆಯೋ ಅದನ್ನೇ ಆರ್.ಎಸ್.ಎಸ್. ಪುರಸ್ಕರಿಸಿ ಅನುಷ್ಠಾನಗೊಳಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯ ಆಪ್ತ ಹಾಗೂ ಆರ್‍.ಎಸ್.ಎಸ್. ಮುಖಂಡ ಹೊಸಬಾಳೆಯವರು ಬಿಹಾರದ ಔರಂಗಾಬಾದ್‍ನಲ್ಲಿ ವಾಗ್ದಾನ ನೀಡಿರುವರು.

ಬಾಬ್ರಿ ಮಸೀದಿ ಧ್ವಂಸಗೊಂಡಿರುವ ಸ್ಥಳದಲ್ಲಿಯೇ ರಾಮಮಂದಿರದ ನಿರ್ಮಾಣವಾಗಬೇಕೆನ್ನುವ ಆರ್‍ ಎಸ್‍ಎಸ್ ವಾದಕ್ಕೆ ಧರ್ಮ ಸಂಸದ್ ನಿರ್ಣಯವು ಅಂತಿಮ ಮುದ್ರೆ ಒತ್ತಿ ವಿವಾದಕ್ಕೆ ತೆರೆ ಎಳೆಯಲಿದೆ.  (ಕೆ.ಎಂ.ಆರ್)

Leave a Reply

comments

Related Articles

error: