ಮೈಸೂರು

ನಂಜನಗೂಡು-ಗುಂಡ್ಲುಪೇಟೆ ಎರಡೂ ಕಡೆ ಕಾಂಗ್ರೆಸ್ ಗೆ ಗೆಲುವು: ಸಚಿವ ಎಚ್.ಸಿ.ಮಹ‍ದೇವಪ್ಪ

ನಂಜನಗೂಡು ಹಾಗೂ ಗುಂಡ್ಲುಪೇಟೆ ಎರಡೂ ಕಡೆಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುತ್ತದೆ ಎಂದು ಮೈಸೂರಿನಲ್ಲಿ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ. ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಕೋಮುವಾದಿಗಳ ವಿರೋಧಿ. ಅವರ ಪಕ್ಷದ ಮತಗಳು ಕಾಂಗ್ರೆಸ್ ಗೆ ಬರಲಿವೆ. ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ನ ಬೆಂಬಲವಿದೆ ಎಂದು ತಿಳಿಸಿದರು.

ಇದು ಸಾವರ್ತ್ರಿಕ ಚುನಾವಣೆಗೆ ದಿಕ್ಸೂಚಿ ಅಲ್ಲ. ಜನರು ಅಭಿವೃದ್ಧಿಯನ್ನು ಯಾವ ರೀತಿ ಪರಿಗಣಿಸಿದ್ದಾರೆ ಎಂಬುದು ತಿಳಿಯುತ್ತದೆ. ಇದು ಕೋಮುವಾದ – ಜಾತ್ಯಾತೀತ ನಡುವಿನ ಹೋರಾಟ. ಜಾತ್ಯಾತೀತ ಪಕ್ಷಗಳ ಒಗ್ಗೂಡಿವಿಕೆ ಕಾಂಗ್ರೆಸ್ ಗೆಲುವಿಗೆ ಕಾರಣವಾಗಲಿದೆ ಎಂದು ಹೇಳಿದರು. (ಎಸ್.ಎನ್-ಎಲ್.ಜಿ)

Leave a Reply

comments

Related Articles

error: