ಪ್ರಮುಖ ಸುದ್ದಿಮೈಸೂರು

ಕೆಆರ್ ಎಸ್ ನಿಂದ 30,000 ಕ್ಯೂಸೆಕ್ ನೀರು ಹೊರಕ್ಕೆ : ಸಂರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳಲು ಸೂಚನೆ

ರಾಜ್ಯ(ಮಂಡ್ಯ)ಆ.7:- ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೃಷ್ಣರಾಜ ಸಾಗರ ಅಣೆಕಟ್ಟೆಯ ನೀರಿನ ಗರಿಷ್ಠ ಮಟ್ಟ 124.80 ಅಡಿಯಾಗಿದ್ದು, ಇಂದಿನ ನೀರಿನ ಮಟ್ಟ 113.85 ಇರುತ್ತದೆ. ಕಾವೇರಿ ಕಣಿವೆಯಲ್ಲಿ ನಿರಂತರ ವ್ಯಾಪಕ ಮಳೆಯಾಗುತ್ತಿದ್ದು ನೀರಿನ ಒಳಹರಿವು 48906 ಕ್ಯೂಸೆಕ್ ಇದ್ದು 3120 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.

ಇಂದು ಮಧ್ಯಾಹ್ನದ ನಂತರ ಯಾವ ಸಂದರ್ಭದಲ್ಲಾದರೂ ಒಳಹರಿವು ಹೆಚ್ಚಾಗುವ ಸಾಧ್ಯತೆ ಇದ್ದು ಈ ಸಂದರ್ಭದಲ್ಲಿ ಅಣೆಕಟ್ಟೆಯಿಂದ ನದಿಗೆ ನೀರನ್ನು 30,000ದಿಂದ 50,000ಕ್ಯೂಸೆಕ್ ಗೆ ಹೆಚ್ಚಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕಾವೇರಿ ನದಿ ಪಾತ್ರದ ಕೆಳ ಪ್ರದೇಶದಲ್ಲಿ ವಾಸಿಸುವ ಎಲ್ಲಾ ಸಾರ್ವಜನಿಕರು ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಿದೆ. ನದಿ ತೀರದ ಪ್ರದೇಶಗಳಲ್ಲಿ ಸಾರ್ವಜನಿಕರು ಓಡಾಡುವುದನ್ನು ನಿರ್ಬಂಧಿಸಿದೆ. ಸಾಕುಪ್ರಾಣಿಗಳಾದ ದನ, ಕರು, ಎತ್ತು ನಾಯಿ ಹಾಗೂ ಇತರೆ ಪ್ರಾಣಿಗಳನ್ನು ಸಂರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲು ಮಂಡ್ಯ ಜಿಲ್ಲಾಧಿಕಾರಿ ಕೋರಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: