ಪ್ರಮುಖ ಸುದ್ದಿ

ಜಿಲ್ಲಾಧಿಕಾರಿಗಳ ಕಚೇರಿಗೂ ಅಪಾಯದ ಆತಂಕ

ರಾಜ್ಯ( ಮಡಿಕೇರಿ) ಆ.8 :- ಮಡಿಕೇರಿ ಮೂಲಕ ಹಾದು ಹೋಗುವ ಮಂಗಳೂರು ರಸ್ತೆಯಲ್ಲಿ ಬರೆ ಕುಸಿತವಾಗುತ್ತಿದ್ದು, ಇದರ ಪರಿಣಾಮ ರಸ್ತೆ ಪಕ್ಕದಲ್ಲೇ ಇರುವ ಜಿಲ್ಲಾಡಳಿತದ ಕಚೇರಿಗಳ ಸಂಕೀರ್ಣದ ಬೃಹತ್ ಕಟ್ಟಡ ಆತಂಕ ಎದುರಿಸುತ್ತಿದೆ.
ಕಟ್ಟಡದ ಪಕ್ಕದಲ್ಲೇ ಬರೆ ಕುಸಿದಿದ್ದು, ಪ್ಲಾಸ್ಟಿಕ್ ಶೀಟ್ ಗಳನ್ನು ಹಾಕಿ ಸಂರಕ್ಷಿಸುವ ಪ್ರಯತ್ನ ಮಾಡಲಾಗಿದೆ. ಕಟ್ಟಡದ ಸುರಕ್ಷತೆಗೆ ಯಾವುದೇ ತಡೆಗೋಡೆ ನಿರ್ಮಿಸದೇ ಇರುವುದರಿಂದ ಮಣ್ಣು ಕುಸಿದರೆ ಕಚೇರಿ ಸಂಕೀರ್ಣಕ್ಕೂ ಹಾನಿಯಾಗುವ ಸಾಧ್ಯೆತಗಳಿದೆ. ಇದನ್ನು ಮನಗಂಡು ಪ್ರಮುಖ ಕಚೇರಿಗಳನ್ನು ಮಡಿಕೇರಿ ನಗರಸಭೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಮಳೆಹಾನಿಯ ತುರ್ತು ಕಾರ್ಯಗಳು ನಗರಸಭೆಯ ಕಟ್ಟಡದಿಂದಲೇ ನಡೆಯಲಿದೆ. ಜಿಲ್ಲಾಧಿಕಾರಿಗಳು ಕೂಡ ಇದೇ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: