ಕರ್ನಾಟಕ

ಕೇಂದ್ರದ ಅನುದಾನ ದುರ್ಬಳಕೆ : ಬಿಬಿಎಂಪಿ ವಿರುದ್ಧ ಡಿ.ವಿ.ಸದಾನಂದ ಗೌಡ ಕಿಡಿ

ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೂ ಕೇಂದ್ರ ಸರ್ಕಾರದ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು  ಬಿಬಿಎಂಪಿ ಬೇಜವಾಬ್ದಾರಿತನಕ್ಕೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಕಿಡಿಕಾರಿ ಕಾನೂನು ಕ್ರಮ ಜರುಗಿಸುವ ಬಗ್ಗೆ ಎಚ್ಚರಿಕೆ ನೀಡಿದರು.
2016ನೇ ಸಾಲಿನಲ್ಲಿ ಬಿಬಿಎಂಪಿಯೂ ತೆರಿಗೆ ಸಂಗ್ರಹದಲ್ಲಿ 2,600 ಕೋಟಿ ರೂಪಾಯಿ ನಿರೀಕ್ಷಿತ ಗುರಿ ಬದಲಿಗೆ ಕೇವಲ 1600 ಕೋಟಿ ರೂಪಾಯಿ ಮಾತ್ರ ಸಂಗ್ರಹಿಸಲಾಗಿದ್ದು ಇದು ಬಿಬಿಎಂಪಿಯ ಹೊಣೆಗೇಡಿತನವನ್ನು ನಿರೂಪಿಸುವುದು ಎಂದು ದೂರಿದ ಅವರು, ಬಿಬಿಎಂಪಿ ಪ್ರಸಕ್ತ ಸಾಲಿನಲ್ಲಿ 9.41 ಕೋಟಿ ರೂಪಾಯಿ ನಿರೀಕ್ಷಿತ ಬಜೆಟ್ ಮಂಡಿಸಿದ್ದು, ಶೇ.46ರಷ್ಟು ಸಂಪನ್ಮೂಲವನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರದ ಅನುದಾನದಿಂದಲೇ ನಿರೀಕ್ಷಿಸಲಾಗಿರುವುದು ಸಮಂಜಸವಲ್ಲವೆಂದರು.
ಕೇಂದ್ರ ಸರ್ಕಾರವೂ 2016ನೇ ಸಾಲಿನಲ್ಲಿ ಬೆಂಗಳೂರು ಮಹಾನಗರ ಪಾಲಿಕೆಗೆ ರಾಲುಕಾಲುವೆ ಅಭಿವೃದ್ಧಿ, ವಾಹನ ನಿಲುಗಡೆ, ರಸ್ತೆ, ಮೇಲ್ಸೇತುವೆ ಸೇರಿದಂತೆ ಬೆಂಗಳೂರು ನಗರಾಭಿವೃದ್ಧಿಗೆ ಸುಮಾರು 200 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿತ್ತು, ಆದರೆ ಬಿಬಿಎಂಪಿ ಹಣವನ್ನು ನಿಗದಿತ ಕಾಮಗಾರಿಗೆ ಬಳಸದೆ ಇತರೆ ಉದ್ದೇಶಗಳಿಗೆ ಬಳಸಿರುವುದನ್ನು ಗಂಭೀರವಾಗಿ ಪರಿಗಣಿಸಿ ತೀವ್ರ ತರಾಟೆಗೆ ತೆಗೆದುಕೊಂಡರು.
ಸಮರ್ಥವಾಗಿ ಕಾರ್ಯಪ್ರವೃತ್ತರಾದರೆ ಜಾಹೀರಾತು ತೆರಿಗೆಯಲ್ಲಿಯೇ ಸಾಕಷ್ಟು ಆದಾಯ ಸಂಗ್ರಹಿಸಬಹುದು, ಅಂತರಾಷ್ಟ್ರೀಯ ವಿಮಾನ ನಿಲ್ದಾಣದ 5 ಕಿ.ಮೀ ವ್ಯಾಪ್ತಿಯಲ್ಲಿಯೇ ಸುಮಾರು 200 ಕೋಟಿಗೂ ಅಧಿಕ ಸಂಪನ್ಮೂಲ ಸಂಗ್ರಹಿಸುವ ಅವಕಾಶವಿದೆ ಎಂದು ವ್ಯವಹಾರಿಕ ಜ್ಞಾನವನ್ನು ತಿಳಿಸಿದ ಅವರು, ಟ್ರೇಡ್ ಲೈಸೆನ್ಸ್ ವ್ಯಾಪ್ತಿಗೆ 5 ಲಕ್ಷ ವಾಣಿಜ್ಯ ಸಂಸ್ಥೆಗಳು ಸೇರಿಸುವ ಅವಕಾಶವಿದ್ದರು ಕೇವಲ 60 ಸಾವಿರ ಸಂಸ್ಥೆಗಳನ್ನು ಸೇರಿಸಲಾಗಿದ್ದು ರಾಜ್ಯದ ಆದಾಯಕ್ಕೆ ಬಹು ದೊಡ್ಡ ಹೊಡೆತವೆಂದು ಬೇಸರ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಸಂಪನ್ಮೂಲ ಕ್ರೋಡಿಕರಣದ ಬಗ್ಗೆ ಶಿಸ್ತುಬದ್ಧತೆಯನ್ನು ಅಳವಡಿಸಿಕೊಳ್ಳಬೇಕು, ಕೇಂದ್ರ ಅನುದಾನದ ನಿಗದಿತ ಕಾಮಗಾರಿಯನ್ನೇ ಹಮ್ಮಿಕೊಂಡು ಅನುದಾನವನ್ನು ಸಮಪರ್ಕ ಸದ್ಬಳಕೆ ಮಾಡಿಕೊಳ್ಳಿ ಹಾಗೂ ತೆರಿಗೆ ಸಂಗ್ರಹವನ್ನು ತೀವ್ರಗೊಳಿಸಿ ಎಂದು ಕಿವಿ ಮಾತು ಹೇಳಿದರು. (ಕೆ.ಎಂ.ಆರ್)

Leave a Reply

comments

Related Articles

error: