ಪ್ರಮುಖ ಸುದ್ದಿ

ದೇಶದಲ್ಲಿ ಸೋಂಕಿತರ ಸಂಖ್ಯೆ ಸುಮಾರು 21 ಲಕ್ಷ :  24 ಗಂಟೆಗಳಲ್ಲಿ 61 ಸಾವಿರ ಹೊಸ ಕೊರೋನಾ ಪ್ರಕರಣ , ಸಾವಿನ ಪ್ರಮಾಣ 2.03% ಕ್ಕೆ ಇಳಿಕೆ

ದೇಶ(ನವದೆಹಲಿ)ಆ.8:- ಭಾರತದಲ್ಲಿ ಕೊರೋನಾ ಸಾಂಕ್ರಾಮಿಕ ರೋಗದ  ಪರಿಸ್ಥಿತಿ ಗಂಭೀರವಾಗುತ್ತಿದೆ. ಸತತ ಎರಡನೇ ದಿನವೂ ದೇಶದಲ್ಲಿ 60 ಸಾವಿರಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆಯಾಗಿವೆ.

ಕೊರೋನಾ ವೈರಸ್ ಸೋಂಕು ಪ್ರಕರಣ  21 ಲಕ್ಷಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 61 ಸಾವಿರ 537 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 933 ಮಂದಿ ಸಾವನ್ನಪ್ಪಿದ್ದಾರೆ. ಒಂದು ದಿನದ ಹಿಂದೆ  62 ಸಾವಿರ 538 ಪ್ರಕರಣಗಳು ವರದಿಯಾಗಿತ್ತು. ಇದು ಇನ್ನೂ ಒಂದು ದಿನದಲ್ಲಿ ಅತಿ ಹೆಚ್ಚು ಪ್ರಕರಣಗಳಾಗಿವೆ. ದೇಶದಲ್ಲಿ ಕೊರೋನಾದಿಂದ ಚೇತರಿಸಿಕೊಳ್ಳುವವರ ಚೇತರಿಕೆ ಪ್ರಮಾಣ 68.32%. ಭಾರತದಲ್ಲಿ ಒಟ್ಟು ಪ್ರಕರಣಗಳಲ್ಲಿ 38 ಪ್ರತಿಶತ ಕೇವಲ ಐದು ರಾಜ್ಯಗಳಲ್ಲಿವೆ. ಇದರಲ್ಲಿ ಆಂಧ್ರಪ್ರದೇಶ, ಕರ್ನಾಟಕ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಬಿಹಾರ ಸೇರಿವೆ. ಜುಲೈ 16 ರವರೆಗೆ ದೇಶದಲ್ಲಿ 10 ಲಕ್ಷ ಕೊರೋನಾ ಪ್ರಕರಣಗಳು ಇದ್ದಾಗ, ಈ ರಾಜ್ಯಗಳಿಂದ 19 ಪ್ರತಿಶತ ಪ್ರಕರಣಗಳು ವರದಿಯಾಗಿವೆ.

ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ ದೇಶದಲ್ಲಿ ಒಟ್ಟು 20 ಲಕ್ಷ 88 ಸಾವಿರ ಪ್ರಕರಣಗಳು ಪತ್ತೆಯಾಗಿವೆ. ಈ ಪ್ರಕರಣಗಳಲ್ಲಿ ಸಕ್ರಿಯ ರೋಗಿಗಳ ಸಂಖ್ಯೆ 6 ಲಕ್ಷ 19 ಸಾವಿರ. ಅದೇ ಸಮಯದಲ್ಲಿ  14 ಲಕ್ಷ 27 ಸಾವಿರ ಜನರು  ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಈವರೆಗೆ 42 ಸಾವಿರ 518 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಂಕಿಅಂಶಗಳ ಪ್ರಕಾರ  ಸಾವಿನ ಪ್ರಮಾಣವು ಶೇಕಡಾ 2.03 ಕ್ಕೆ ಇಳಿದಿದೆ. ಸತತ ಒಂಭತ್ತನೇ ದಿನದಲ್ಲಿ 50,000 ಕ್ಕೂ ಹೆಚ್ಚು ಸೋಂಕು ಪತ್ತೆಯಾಗಿದೆ.  (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: