ನಮ್ಮೂರುಮೈಸೂರು

ರಂಗಭೂಮಿಯಲ್ಲಿ ಕಲೆಯನ್ನು ವೃದ್ಧಿಸುವ ಗುಣವಿದೆ:ಪ್ರಸನ್ನ

ರಂಗಾಯಣದ ಭೂಮಿಗೀತದಲ್ಲಿ ವಿ.ವಿ.ಕಾರಂತ ಕಾಲೇಜು ರಂಗೋತ್ಸವ ಪ್ರಯುಕ್ತ ನಡೆದ ಬೆಂಗಳೂರಿನ ಶೂನ್ಯ ತಂಡದ ಐಕ್ಯತೆ ಎಂಬ ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ರಂಗ ನಿರ್ದೇಶಕ ಪ್ರಸನ್ನ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ರಂಗಭೂಮಿಯಲ್ಲಿ ವಿದ್ಯಾರ್ಥಿಗಳಿಗೆ ಭಾಷೆ, ಸಂಸ್ಕೃತಿ, ಬದುಕುವ ಕಲೆ ಮತ್ತು ಸಂವಹನ ಕೌಶಲ್ಯ ವೃದ್ಧಿಸುವ ಗುಣವಿದೆ. ಅಪಾರ ಶಕ್ತಿಯನ್ನು ಹೊಂದಿರುವ ರಂಗಭೂಮಿಯನ್ನು ನಾವು ಸದುಪಯೋಗಪಡಿಸಿಕೊಳ್ಳಬೇಕು. ಮಾತೃ ಭಾಷೆಗಿಂತ ಇಂಗ್ಲೀಷ್ ಭಾಷೆಯ ಮೇಲಿನ ವ್ಯಾಮೋಹ ಹೆಚ್ಚಾಗುತ್ತಿದೆ. ಶ್ರಮಕ್ಕಿಂತ ಸುಲಭದ ಕೆಲಸದಲ್ಲಿ ಹೆಚ್ಚು ತೊಡಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ವಾತಾಪಿ ಗಣಪತಿಂ ಭಜೆ, ಕೀರ್ವಾಣಿ ರಾಗ ಸಂಗೀತ ಕೇಳಿ ಬಂತು. ಮಹಾಜನ ಪದವಿ ಕಾಲೇಜಿನ ವಿದ್ಯಾರ್ಥಿಗಳು ಅಜ್ಞಾತ ಕನಸುಗಳು ನಾಟಕವನ್ನು ಪ್ರದರ್ಶಿಸಿದರು.

ರಂಗಾಯಣ ನಿರ್ದೇಶಕ ಹೆಚ್.ಜನಾರ್ದನ್, ಉಪನಿರ್ದೇಶಕಿ ನಿರ್ಮಲಾ ಮಠಪತಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: