ದೇಶ

ಏ.2ರಂದು ಕಾಶ್ಮೀರಕ್ಕೆ ಪ್ರಧಾನಿ ಭೇಟಿ : ಪ್ರತ್ಯೇಕತಾವಾದಿಗಳ ಪ್ರತಿಭಟನೆ

ಪ್ರಧಾನಿ ನರೇಂದ್ರ ಮೋದಿಯವರು ಏ.2ರಂದು ಕಾಶ್ಮೀರಕ್ಕೆ  ಭೇಟಿ ನೀಡುವ ಹಿನ್ನೆಲೆಯಲ್ಲಿ ಪ್ರತ್ಯೇಕತಾವಾದಿಗಳು  ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.

ಶ್ರೀನಗರ – ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ದೇಶದಲ್ಲಿಯೇ ಅತೀ ಉದ್ದವಾದ ‘ಚೆನಾನಿ-ನಾಶ್ರಿ’ ಸುರಂಗ ಮಾರ್ಗವನ್ನು ಏ.2ರಂದು ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆಗೊಳಿಸುತ್ತಿದ್ದು ಇದೇ ಸಂದರ್ಭದಲ್ಲಿ ಪ್ರತ್ಯೇಕತಾವಾದಿಗಳು ಪ್ರತಿಭಟನೆ ನಿರ್ಣಯವನ್ನು ಕೈಗೊಂಡಿದ್ದು ನಗರವನ್ನು ಸಂಪೂರ್ಣ ಬಂದ್‍ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಮುಖಂಡರಾದ ಸಯ್ಯದ್ ಅಲಿ ಶಾ ಗೀಲಾನಿ, ಮಿರ್ವಾಜ್ ಉಮರ್ ಫಾರೂಕ್ ಹಾಗೂ ಜೆಕೆಎಲ್ಎಫ್ ಅಧ್ಯಕ್ಷ ಮೊಹ‍ಮದ್ ಯಾಸಿನ್ ಮಲಿಕ್ ಜಂಟಿ ಹೇಳಿಕೆಯನ್ನು ನೀಡಿದ್ದಾರೆ. (ಕೆ.ಎಂ.ಆರ್)

 

Leave a Reply

comments

Related Articles

error: