ದೇಶಪ್ರಮುಖ ಸುದ್ದಿಮನರಂಜನೆ

ನಟ ಅಭಿಷೇಕ್ ಬಚ್ಚನ್ ಕೋವಿಡ್ ಸೋಂಕಿನಿಂದ ಗುಣಮುಖ

ಮುಂಬೈ,ಆ.8-ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದಾರೆ. ಅಭಿಷೇಕ್ ಅವರ ಕೋವಿಡ್ ವರದಿ ನೆಗೆಟಿವ್ ಬಂದಿದೆ.

ಈ ಬಗ್ಗೆ ಸ್ವತಃ ಅವರೇ ಟ್ವೀಟ್ ಮಾಡಿದ್ದಾರೆ. ಗೆಳೆಯರೇ ಈ ಮೊದಲು ನಾನು ನಿಮಗೆ ಹೇಳಿಲ್ಲವೇ, ಕೊರೊನಾವನ್ನು ನಾನು ಸೋಲಿಸಿಯೇ ಆಚೆ ಬರುತ್ತೇನೆಂದು. ಅದರಂತೆ ಇದೀಗ ನನ್ನ ಪರೀಕ್ಷಾ ವರದಿ ನೆಗೆಟಿವ್​ ಬಂದಿದೆ. ನನ್ನ ಚೇತರಿಕೆಗೆ ಪ್ರಾರ್ಥಿಸಿದ ನನ್ನ ಕುಟುಂಬಕ್ಕೆ ಮತ್ತು ಆತ್ಮಿಯರಿಗೆ ಮುಖ್ಯವಾಗಿ ಆಸ್ಪತ್ರೆ ವೈದ್ಯರಿಗೆ ನನ್ನ ಧನ್ಯವಾದ ಎಂದಿದ್ದಾರೆ. ಆದರೆ, ಯಾವಾಗ ಆಸ್ಪತ್ರೆಯಿಂದ ಬಿಡುಗಡೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ಕೊರೊನಾ ಸೋಂಕು ತಗುಲಿ 25ಕ್ಕೂ ಹೆಚ್ಚು ದಿನಗಳನ್ನು ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಗುಣಮುಖರಾಗಿ ಮನೆಗೆ ತೆರಳಲು ಸಿದ್ಧರಾಗಿದ್ದಾರೆ.

ಕಳೆದ ಕೆಲ ದಿನಗಳ ಹಿಂದಷ್ಟೇ ಅಮಿತಾಬ್​ ಬಚ್ಚನ್​ ಕೊರೊನಾದಿಂದ ಗುಣಮುಖರಾಗಿ ಮನೆ ಸೇರಿದ್ದರು. ಅಷ್ಟೇ ಅಲ್ಲ ಆದಷ್ಟು ಬೇಗ ಅಭಿಷೇಕ್​ ಗುಣಮುಖನಾಗಿ ಆಚೆ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದರು. ಅದರಂತೆ ಇದೀಗ ಅಭಿಷೇಕ್​ ಕೋವಿಡ್ ವರದಿ ನೆಗೆಟಿವ್​ ಬಂದಿದೆ.

ಈ ಮೊದಲು ಅಮಿತಾಬ್​ಗೆ ಸೋಂಕು ಕಾಣಿಸಿಕೊಂಡಿತ್ತು. ಬಳಿಕ ಅಭಿಷೇಕ್​ ಮತ್ತು ಐಶ್ವರ್ಯಾ ರೈ, ಪುತ್ರಿ ಆರಾಧ್ಯಳಿಗೂ ಸೋಂಕು ದೃಢಪಟ್ಟಿತ್ತು. ಇದೀಗ ಇಡೀ ಕುಟುಂಬ ಕೊರೊನಾದಿಂದ ಗುಣಮುಖರಾಗಿದ್ದಾರೆ. (ಏಜೆನ್ಸೀಸ್​, ಎಂ.ಎನ್)

 

Leave a Reply

comments

Related Articles

error: