ದೇಶಪ್ರಮುಖ ಸುದ್ದಿ

ರಾಂಚಿಯಲ್ಲಿ ತುರ್ತು ಭೂ ಸ್ಪರ್ಶ ಮಾಡಿದ ಏರ್ ಏಷ್ಯಾ ವಿಮಾನ

ರಾಂಚಿ,ಆ.8-ಜಾರ್ಖಂಡ್ ನ ರಾಂಚಿಯಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ಏರ್ ಏಷ್ಯಾ ವಿಮಾನ ಟೇಕಾಫ್ ಆದ ಮರು ಕ್ಷಣದಲ್ಲೇ ತುರ್ತು ಭೂ ಸ್ಪರ್ಶ ಮಾಡಿದೆ.

ಟೇಕಾಫ್‌ ಆಗುವ ವೇಳೆ ವಿಮಾನಕ್ಕೆ ಹಕ್ಕಿಯೊಂದು ಬಡಿದಿದೆ. ಹೀಗಾಗಿ ವಿಮಾನ ಕೂಡಲೇ ಭೂಸ್ಪರ್ಶ ಮಾಡಿದೆ. ವಿಮಾನದಲ್ಲಿದ್ದ ಪ್ರಯಾಣಿಕರೂ ಸೇರಿದಂತೆ ಪ್ರತಿಯೊಬ್ಬರೂ ಕ್ಷೇಮವಾಗಿರುವುದಾಗಿ ವಿಮಾನ ನಿಲ್ದಾಣ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಸಮಸ್ಯೆ ಸರಿಪಡಿಸಿದ ನಂತರ, ಪ್ರಕ್ರಿಯೆಗಳೆಲ್ಲವನ್ನೂ ಪೂರ್ಣಗೊಳಿಸಿ ವಿಮಾನ ಮುಂಬೈಗೆ ಹಾರಾಟ ಕೈಗೊಂಡಿತು ಎಂದು ಏರ್‌ಏಷ್ಯಾ ವಕ್ತಾರರು ತಿಳಿಸಿದ್ದಾರೆ.

ವಿಮಾನಕ್ಕೆ ಹಕ್ಕಿ ಬಡಿದ ವಿಚಾರವನ್ನು ವಿಮಾನ ನಿಲ್ದಾಣದ ನಿರ್ದೇಶಕ ವಿನೋದ್‌ ಶರ್ಮಾ ಖಚಿತ ಪಡಿಸಿದ್ದು, ಘಟನೆಯ ಬಗ್ಗೆ ಸ್ವತಃ ತಾವೇ ಪರಿಶೀಲನೆ ನಡೆಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.

ಕೇರಳದಲ್ಲಿ ಏರ್‌ ಇಂಡಿಯಾ ವಿಮಾನ ದುರಂತಕ್ಕೀಡಾಗಿ 18 ಮಂದಿ ಮೃತಪಟ್ಟ ಮರುದಿನವೇ ಈ ಘಟನೆ ನಡೆದಿದೆ. (ಎಂ.ಎನ್)

Leave a Reply

comments

Related Articles

error: