ಪ್ರಮುಖ ಸುದ್ದಿ

ಕೊಡಗಿನ ಪತ್ರಕರ್ತರನ್ನೂ ಕಾಡಿದ ಕೋವಿಡ್ 19 : ಸೋಂಕಿತರ ಸಂಖ್ಯೆ 683 ಕ್ಕೆ ಏರಿಕೆ

ರಾಜ್ಯ( ಮಡಿಕೇರಿ) ಆ.8 :- ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 683ಕ್ಕೆ ಏರಿಕೆಯಾಗಿದೆ. ಈ ಪೈಕಿ 402 ಮಂದಿ ಗುಣಮುಖರಾಗಿದ್ದು, 270 ಸಕ್ರಿಯ ಪ್ರಕರಣಗಳಿವೆ. 11 ಮಂದಿ ಸಾವಿಗೀಡಾಗಿದ್ದು, ಜಿಲ್ಲೆಯಲ್ಲಿನ ಕಂಟೈನ್ಮೆಂಟ್ ವಲಯಗಳ ಸಂಖ್ಯೆ 193 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಶನಿವಾರ ನ್ಯಾಯಾಂಗ, ಅಂಚೆ, ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಮೂವರು ಪತ್ರಕರ್ತರ ಸಹಿತ 44 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.
ಅಂಚೆ ಇಲಾಖೆ ಸಿಬ್ಬಂದಿಗಳಾದ ಮೈಸೂರಿನ ಅರವಿಂದ ನಗರದ 30 ವರ್ಷದ ಪುರುಷ, ಕೆ.ಆರ್ ನಗರದ ಕಗ್ಗೆರೆಯ 32 ವರ್ಷದ ಪುರುಷ,ಕುಶಾಲನಗರದ ಚಿಕ್ಕಣ್ಣ ಬೀದಿಯ 37 ವರ್ಷದ ಮಹಿಳೆ,ಶಿರಂಗಾಲದ ಪೇಟೆ ಬೀದಿಯ 27 ವರ್ಷದ ಮಹಿಳೆ,ಕುಶಾಲನಗರದ ಪೊಲೀಸ್ ಗ್ರೌಂಡ್ ನ 4 ನೇ ಬ್ಲಾಕಿನ 58 ವರ್ಷದ ಮಹಿಳೆ, ಕುಶಾಲನಗರದ ಗುಡ್ಡೆಹೊಸೂರುವಿನ ದೊಡ್ಡಬೆಟ್ಟಗೇರಿಯ 28 ವರ್ಷದ ಮಹಿಳೆ, ಕುಶಾಲನಗರದ ಹಾರಂಗಿ ಹಿನ್ನೀರು ಬಳಿಯ ಹೇರೂರುವಿನ 27ವರ್ಷದ ಪುರುಷ, ಕೊಪ್ಪ 2ನೇ ಬ್ಲಾಕಿನ 29 ವರ್ಷದ ಪುರುಷ,ಕುಶಾಲನಗರ ಕೂಡಿಗೆ ಬಸವನತ್ತೂರುವಿನ 20ವರ್ಷದ ಪುರುಷ,ಸೋಮವಾರಪೇಟೆ ನಂಜರಾಯಪಟ್ಟಣ ದಾಸವಾಳ ಪೈಸಾರಿಯ 27ವರ್ಷದ ಪುರುಷ, ಕುಶಾಲನಗರ ಹಾರಂಗಿಯ ಯಡವನಾಡುವಿನ 27 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ.
ಮತ್ತೊಂದೆಡೆ ಪತ್ರಕರ್ತರಾದ ಮಡಿಕೇರಿ ವಾರ್ತಾಭವನ ಬಳಿಯ ಸ್ಟುವರ್ಟ್ ಹಿಲ್ ರಸ್ತೆಯ 45ವರ್ಷದ ಮಹಿಳೆ, ಮಡಿಕೇರಿ ಜಿ.ಟಿ ವೃತ್ತದ ಹೊಳ್ಳ ಕಾಂಪ್ಲೆಕ್ಸ್ ನ 25 ವರ್ಷದ ಪುರುಷ, ಮಡಿಕೇರಿ ಇಂದಿರಾ ನಗರದ ಅಂಗನವಾಡಿ ಬಳಿಯ 30 ವರ್ಷದ ಪುರುಷನಲ್ಲೂ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪದ ಕೆಇಬಿ ರಸ್ತೆಯ 56 ವರ್ಷದ ಮಹಿಳೆ, ವೀರಾಜಪೇಟೆಯ ಹಾತೂರುವಿನ ಕೈಮುಡಿಕೆಯ 56 ವರ್ಷದ ಮಹಿಳೆ, ರ್ಯಾಪಿಡ್ ಆಂಟಿಜೆನ್ ಪರೀಕ್ಷೆಯ ಮೂಲಕ ವೀರಾಜಪೇಟೆಯ ವಿಜಯನಗರದ 27 ಮತ್ತು 60 ವರ್ಷದ ಪುರುಷರು, ಮಡಿಕೇರಿಯ ಆಜಾದ್ ನಗರದ 45 ವರ್ಷದ ಪುರುಷ ಮತ್ತು 16 ವರ್ಷದ ಬಾಲಕ, ಕುಶಾಲನಗರದ ಗೊಂದಿಬಸವನಹಳ್ಳಿಯ 40ವರ್ಷದ ಪುರುಷ, ಕುಶಾಲನಗರ ಮುಳ್ಳುಸೋಗೆಯ 52 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ ಎಂದು ಅವರು ಹೇಳಿದ್ದಾರೆ.
ಶನಿವಾರ ಮಧ್ಯಾಹ್ನ ವೀರಾಜಪೇಟೆ ತಾಲೂಕಿನ ಬೆಕ್ಕೆಸೊಡ್ಲೂರು ಗ್ರಾಮದ 35 ವರ್ಷದ ಮಹಿಳೆ, ಸೋಮವಾರಪೇಟೆ ರೇಂಜರ್ ಬ್ಲಾಕ್‍ನ 58 ವರ್ಷದ ಅರೋಗ್ಯ ಕಾರ್ಯಕರ್ತೆ, ಕುಶಾಲನಗರ ಬೈಚನಹಳ್ಳಿಯ 20 ವರ್ಷದ ಪುರುಷ, ಗಂಧದಕೋಟೆಯ ಮಹಾಲಿಂಗೇಶ್ವರ ವರ್ಕ್‍ಶಾಪ್ ಬಳಿಯ 25 ವರ್ಷದ ಮಹಿಳೆ, ಕೊಡ್ಲಿಪೇಟೆ ಕೂಡ್ಲೂರುವಿನ 16 ವರ್ಷದ ಪುರುಷ, ವೀರಾಜಪೇಟೆ ಚಿಕ್ಕಪೇಟೆಯ 22 ವರ್ಷದ ಮಹಿಳೆ ಹಾಗೂ 55ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ.
ಮತ್ತೊಂದೆಡೆ ನ್ಯಾಯಾಂಗ ಇಲಾಖೆ ಸಿಬ್ಬಂದಿಗಳಾದ ಮಡಿಕೇರಿ ಎಫ್‍ಎಂಸಿ ಕಾಲೇಜು ಬಳಿಯ 49 ವರ್ಷದ ಪುರುಷ, 37 ವರ್ಷದ ಪುರುಷ, ವಿಜಯ ವಿನಾಯಕ ದೇವಾಲಯ ಬಳಿಯ 40 ವರ್ಷದ ಪುರುಷ, ಅಪ್ಪಚ್ಚಕವಿ ರಸ್ತೆಯ 40 ವರ್ಷದ ಪುರುಷ, ಕಂಚಿಕಾಮಾಕ್ಷಿ ದೇವಾಲಯ ಬಳಿಯ 24 ವರ್ಷದ ಪುರುಷ, ಚೈನ್‍ಗೇಟ್ ಬಳಿಯ 42ವರ್ಷದ ಪುರುಷ, ವಿಜಯ ವಿನಾಯಕ ದೇವಾಲಯ ಬಳಿಯ 53 ವರ್ಷದ ಪುರುಷ, ಪುಟಾಣಿನಗರ ಅಪ್ಪಚ್ಚು ಕಾಂಪೌಂಡ್‍ನ 59 ವರ್ಷದ ಮಹಿಳೆ, ಹಾಸನ ಕೊಣನೂರಿನ 31 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ.
ವೀರಾಜಪೇಟೆ ತಾಲೂಕಿನ ಬಲ್ಯಮಂಡೂರಿನ 56 ವರ್ಷದ ಪುರುಷ, ಮಡಿಕೇರಿ ಜಿಲ್ಲಾ ಆಸ್ಪತ್ರೆಯ ವಸತಿಗೃಹದ 39 ವರ್ಷದ ಆರೋಗ್ಯ ಕಾರ್ಯಕರ್ತ, ಕುಶಾಲನಗರ ಶಿವರಾಮ ಕಾರಂತ ಬಡಾವಣೆಯ 52 ವರ್ಷದ ಆರೋಗ್ಯ ಕಾರ್ಯಕರ್ತೆ, ಮಡಿಕೇರಿ ತಾಲೂಕಿನ ಚೆಟ್ಟಿಮಾನಿ ಪದಕಲ್ಲು ಗ್ರಾಮದ 70 ವರ್ಷ ಮಹಿಳೆ, ಕೆ.ನಿಡುಗಣೆ ಗ್ರಾಮದ 78 ವರ್ಷದ ಪುರುಷ ಹಾಗೂ ರ್ಯಾಪಿಡ್ ಆಂಟಿಜೆನ್ ಪರೀಕ್ಷೆ ಮೂಲಕ ಗಾಳಿಬೀಡು ಮೊಣ್ಣಂಗೇರಿಯ 44 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: