ಮೈಸೂರು

ಕೆ.ಆರ್.ಎಸ್ ಹಾಗೂ ಕಬಿನಿಯಿಂದ ನೀರು ಬಿಡುಗಡೆ ಹಿನ್ನಲೆ : ತಿ.ನರಸೀಪುರ ತಾಲೂಕಿನಲ್ಲಿ ಪ್ರವಾಹ ಭೀತಿ

ಮೈಸೂರು,ಆ.8:- ಕೆ.ಆರ್.ಎಸ್ ಹಾಗೂ ಕಬಿನಿಯಿಂದ ನೀರು ಬಿಡುಗಡೆ ಹಿನ್ನಲೆ ತಿ.ನರಸೀಪುರ ತಾಲೂಕಿನಲ್ಲಿ ಪ್ರವಾಹದ ಭೀತಿ‌ ಎದುರಾಗಿದ್ದು ನದಿ ಪಾತ್ರದ ಜನತೆಯಲ್ಲಿ ಆತಂಕ ಶುರುವಾಗಿದೆ.

ಮೈಸೂರು ಜಿಲ್ಲೆ ತಿ.ನರಸೀಪುರ ಶ್ರೀ ಗುಂಜಾ ನರಸಿಂಹ ಸ್ವಾಮಿ ದೇವಾಲಯದ ಮೆಟ್ಟಿಲುಗಳು ಮುಳುಗಡೆಯಾಗಿದೆ. ದೇವಸ್ಥಾನದ ಒಳಗಡೆ ಮತ್ತು ಮೆಟ್ಟಿಲುಗಳ ಬಳಿ ಸಾರ್ವಜನಿಕರು ಮತ್ತು ಪ್ರವಾಸಿಗರು ಆಗಮಿಸುವ ಹಿನ್ನಲೆಯಲ್ಲಿ  ತಾಲೂಕು ಆಡಳಿತ ದೇವಸ್ಥಾನದ ಮುಖ್ಯದ್ವಾರ ಬಂದ್ ಮಾಡಿದ್ದು, ಮುಂಜಾಗ್ರತಾ ಕ್ರಮ ಕೈಗೊಂಡಿದೆ.

ತಾಲೂಕು ಆಡಳಿತ ನಿರ್ಧಾರಕ್ಕೆ ಕ್ಯಾರೇ ಎನ್ನದ  ಜನರು ಮೆಟ್ಟಿಲುಗಳ ಬಳಿ   ಬಟ್ಟೆ ಒಗೆಯುತ್ತಿರುವ ದೃಶ್ಯಗಳು ಕಂಡು ಬಂತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: