ಮೈಸೂರು

ಕಬಿನಿ ಜಲಾನಯನ ಭಾರೀ ಮಳೆ ಹಿನ್ನೆಲೆ : ಉಕ್ಕಿ ಹರಿದ ನದಿ ; ಕರ್ನಾಟಕ-ಕೇರಳ ಸಂಚಾರ ಬಂದ್

ಮೈಸೂರು,ಆ.8:- ಕಬಿನಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ನೀರು ಹರಿಯುತ್ತಿದ್ದು ಈ ಹಿನ್ನೆಲೆ ಕರ್ನಾಟಕ –ಕೇರಳ ರಸ್ತೆ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ.

ಕೇರಳದ ವೈನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಕಾರಣ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮೂಲೆಹೊಳೆ ಹಳ್ಳ ಉಕ್ಕಿ ಹರಿಯುತ್ತಿದೆ.  ರಾಷ್ಟ್ರೀಯ ಹೆದ್ದಾರಿ 206ರ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ತಾತ್ಕಾಲಿಕವಾಗಿ ಕರ್ನಾಟಕ-ಕೇರಳ ಸಂಚಾರವನ್ನು ಬಂದ್ ಮಾಡಿದ್ದಾರೆ.

ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಮೂಲೆಹೊಳೆಯು ನಿರಂತರ ಮಳೆಯಿಂದಾಗಿ ತುಂಬಿ ಹರಿಯುತ್ತಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಕಳೆದ 24 ಗಂಟೆಗಳಿಂದ ಕರ್ನಾಟಕ-ಕೇರಳ ನಡುವಿನ ಸಂಚಾರ ಸ್ಥಗಿತಗೊಳಿಸಲಾಗಿದೆ.  ಈ ಕಾರಣ ನಿನ್ನೆ ಕೇರಳ ಕರ್ನಾಟಕ ಸಂಚರಿಸುವ ಸರಕು ಸಾಗಣೆ ಮಾಡುವ ವಾಹನಗಳು ಮದ್ದೂರು ಚೆಕ್ ಪೋಸ್ಟ್ ನಲ್ಲೇ ಸಾಲುಗಟ್ಟಿ ನಿಂತಿದ್ದವು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: