ಮೈಸೂರು

ವಕೀಲರ ತಿದ್ದುಪಡಿ ಮಸೂದೆ-2017 ನ್ನು ವಿರೋಧಿಸಿ ಕಲಾಪ ಬಹಿಷ್ಕಾರ

ರಾಷ್ಟ್ರೀಯ ಕಾನೂನು ಆಯೋಗ ಶಿಫಾರಸ್ಸು ಮಾಡಿರುವ  ವಕೀಲರ ವೃತ್ತಿಗೆ ಹಾಗೂ ಹಕ್ಕುಗಳಿಗೆ ಚ್ಯುತಿ ತರುವಂಥಹ ಅಸಂವಿಧಾನಿಕ ವಕೀಲರ (ತಿದ್ದುಪಡಿ) ಮಸೂದೆ-2017’ ವಿರೋಧಿಸಿ ಭಾರತೀಯ ವಕೀಲರ ಪರಿಷತ್ ಮತ್ತು ಕರ್ನಾಟಕ ರಾಜ್ಯ ವಕೀಲರ ಪರಿಷತ್ ಶುಕ್ರವಾರ ನ್ಯಾಯಾಲಯ ಕಲಾಪ ಬಹಿಷ್ಕರಿಸಿತು. ಅದಕ್ಕೆ ಬೆಂಬಲವಾಗಿ ಮೈಸೂರಿನಲ್ಲಿಯೂ ವಕೀಲರು ನ್ಯಾಯಾಲಯ ಕಲಾಪ ಬಹಿಷ್ಕರಿಸಿದರು.

ಕಲಾಪ ಬಹಿಷ್ಕರಿಸಿ ಮಾತನಾಡಿದ  ಜಿಲ್ಲಾ ಬಾರ್ ಅಸೋಸಿಯೇಷನ್ ಅಧ‍್ಯಕ್ಷ ರಾಮಮೂರ್ತಿ ರಾಷ್ಟ್ರೀಯ ಕಾನೂನು ಆಯೋಗವು ವಕೀಲರ ಕಾಯ್ದೆ-1961 ಕ್ಕೆ ಕೆಲವೊಂದು ತಿದ್ದುಪಡಿ ತಂದು ‘ವಕೀಲರ ತಿದ್ದುಪಡಿ ಮಸೂದೆ-2017’ ನ್ನು ಸಿದ್ಧಪಡಿಸಿತು. ಆದರೆ ಆ ತಿದ್ದುಪಡಿ ಮಸೂದೆಯಲ್ಲಿ ವಕೀಲರ ವೃತ್ತಿ ಮತ್ತು ಮೂಲಭೂತ ಹಕ್ಕುಗಳಿಗೆ ಧಕ್ಕೆ ತರುವಂತಹ ಹಲವು ನಿಯಮಗಳನ್ನು ಸೇರಿಸಲಾಗಿದೆ. ಇದನ್ನು ಖಂಡಿಸಿ ನ್ಯಾಯಾಲಯ ಕಲಾಪ ಬಹಿಷ್ಕರಿಸಿದ್ದೇವೆ ಎಂದರು.

ಈ ಸಂದರ್ಭದಲ್ಲಿ ವಕೀಲರುಗಳಾದ  ಹೆಚ್.ಅರವಿಂದ್,ಕೋದಂಡರಾಮ,ಶ್ರೀಕೃಷ್ಣ, ಶ್ರೀಕಾಂತ್, ಜೆ.ಲೋಕೇಶ್ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.  (ಎಲ್.ಜಿ-ಎಸ್.ಎಚ್)

Leave a Reply

comments

Related Articles

error: