ಮೈಸೂರು

ಅರಣ್ಯ ನಾಶ, ಪ್ರಾಣಿ-ಮಾನವ ಸಂಘರ್ಷ ಕುರಿತು ವಿಶೇಷ ಉಪನ್ಯಾಸ

ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಅರಣ್ಯ ನಾಶ, ಪ್ರಾಣಿ-ಮಾನವ ಸಂಘರ್ಷ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಉಪನ್ಯಾಸ ಕಾರ್ಯಕ್ರಮವನ್ನು ವನ್ಯಜೀವಿ ತಜ್ಞ ರಾಜಕುಮಾರ್ ದೇವರಾಜೇ ಅರಸ್ ಉದ್ಘಾಟಿಸಿ, ಬಳಿಕ ಮಾತನಾಡಿದ ಅವರು ಕಾಡನ್ನು ಮನುಷ್ಯ ನಾಶಗೊಳಿಸುತ್ತಿರುವುದರಿಂದ ಕಾಡಿನಿಂದ ನಾಡಿಗೆ ಪ್ರಾಣಿಗಳು ವಲಸೆ ಬರಲು ಆರಂಭಿಸಿವೆ. ಪ್ರಾಣಿಪಕ್ಷಿಗಳು ಉಳಿಯಬೇಕಾದಲ್ಲಿ ಕಾಡನ್ನು ಸಂರಕ್ಷಿಸಬೇಕು. ಕಾಡನ್ನು ಉಳಿಸದಿದ್ದಲ್ಲಿ ಪ್ರಾಣಿಗಳ ಸಂತತಿಯೇ ನಾಶವಾಗಲಿದೆ ಎಂದು ಕಳವಳವ್ಯಕ್ತಪಡಿಸಿದರು. ಮನುಷ್ಯ ಕಾಡಿನ ಸಂರಕ್ಷಣೆಯಲ್ಲಿ ಹೆಚ್ಚಿನ ಪಾತ್ರ ವಹಿಸಬೇಕು. ಈ ರೀತಿ ಕಾಡಿನ ಸಂರಕ್ಷಣೆ ಮಾಡುವುದರಿಂದ ನಾಡಿನಲ್ಲಿ ಉತ್ತಮ ಮಳೆಯಾಗಿ ರೈತರು ಉತ್ತಮ ಬೆಳೆ ಬೆಳೆಯಲು ಸಹಕಾರಿಯಾಗಲಿದೆ. ಕಾಡನ್ನು ರಕ್ಷಿಸಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ವಿದ್ಯಾವರ್ಧಕ ಕಾಲೇಜಿನ ಪ್ರಾಂಶುಪಾಲ ಡಾ.ಎಂ. ಶಿವಲಿಂಗೇಗೌಡ, ಸಹಾಯಕ ಉಪನ್ಯಾಸಕಿ ಪ್ರೊ.ರೀನಾ ಥಾಮಸ್ ಉಪಸ್ಥಿತರಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: