ಕ್ರೀಡೆಪ್ರಮುಖ ಸುದ್ದಿ

ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ಆಟಗಾರ ಮೊಷರಫ್ ಹೊಸೇನ್ ಗೆ ಕೊರೋನಾ

ವಿದೇಶ( ಢಾಕಾ),ಆ.11:- ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ಆಟಗಾರ, ಎಡಗೈ ಸ್ಪಿನ್ನರ್ ಮೊಷರಫ್ ಹೊಸೇನ್ ಗೆ ಕೊರೋನಾ ಸೋಂಕಿರುವುದು ದೃಢಪಟ್ಟಿದೆ. 38 ವರ್ಷದ ಹೊಸೇನ್ ಅವರು ಬಾಂಗ್ಲಾದೇಶ ಪರ ಐದು ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ.
ಮೆದುಳಿನಲ್ಲಿ ಗಡ್ಡೆ ಇದ್ದ ಕಾರಣ ಶಸ್ತ್ರಕ್ರಿಯೆಗೆ ಒಳಗಾಗಿದ್ದ ಹೊಸೇನ್ ನಾಲ್ಕು ತಿಂಗಳು ಕಠಿಣ ಚಿಕಿತ್ಸೆಗೆ ಒಳಗಾಗಿದ್ದರು. ಅವರ ತಂದೆ ಇತ್ತೀಚೆಗೆ ಕೋವಿಡ್-19 ಸೋಂಕಿಗೆ ಒಳಗಾಗಿದ್ದರು. ಹೊಸೇನ್ ಅವರಿಗೆ ಕೋವಿಡ್ ಇರುವುದು ಭಾನುವಾರ ದೃಢಪಟ್ಟಿದ್ದು ಮನೆಯಲ್ಲೇ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

‘ನನ್ನ ತಂದೆ ಸೋಂಕಿಗೆ ಒಳಗಾಗಿದ್ದು ಅವರನ್ನು ಸಿಎಂಎಚ್ ಆಸ್ಪತ್ರೆಯ ಐಸಿಯುನಲ್ಲಿ ದಾಖಲಿಸಲಾಗಿದೆ. ಕೆಲವು ದಿನಗಳ ಹಿಂದೆ ನನ್ನಲ್ಲೂ ಲಕ್ಷಣಗಳು ಕಾಣಿಸಿಕೊಂಡವು. ಆದ್ದರಿಂದ ಪರೀಕ್ಷೆಗೆ ಒಳಗಾಗಿದ್ದೆ. ಈಗ ಆರೋಗ್ಯವಾಗಿದ್ದೇನೆ. ಪತ್ನಿ ಮತ್ತು ಮಗುವನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ. ಅವರ ವರದಿ ನೆಗೆಟಿವ್ ಆಗಿದೆ’ ಎಂದು ಹೊಸೇನ್ ಹೇಳಿರುವುದಾಗಿ ಸ್ಥಳೀಯ ದೈನಿಕವೊಂದು ವರದಿ ಮಾಡಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: