ನಮ್ಮೂರುಮೈಸೂರು

ಬರ್ನಾಡ್ ಷಾ ಕುರಿತು ವಿಶೇಷ ಉಪನ್ಯಾಸ

ರೋಮಾಂಚಕಾರಿ ಯುದ್ಧವು ನಡೆದಾಗ ಲೇಖಕ  ಜಿ.ಬಿ.ಷಾ ಎದೆಗಾರಿಕೆಯನ್ನು ತಳೆದ ಚಾಕಲೇಟ್ ಕ್ರೀಮ್ ಸೈನಿಕ ಬೊಂಚ್ಲಿಯ ವ್ಯಕ್ತಿತ್ವದ ಕುರಿತು ಬಣ್ಣಿಸಿದ್ದಾರೆ ಎಂದು ಪ್ರೊಫೆಸರ್ ಗವಿನ್ ಜುಡೆ ವಿಲ್ಸನ್ ತಿಳಿಸಿದರು.

ಮಹಾಜನ ಪ್ರಥಮ ಪಿಯು ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗದ ವತಿಯಿಂದ ಆಯೋಜಿಸಿದ ವಿಶೇಷ ಉಪನ್ಯಾಸದಲ್ಲಿ ಪಾಲ್ಗೊಂಡು ಮಾತನಾಡಿದರು.

ಯುದ್ಧ ಸಮಯದ ವ್ಯಥೆ, ಸರ್ವನಾಶ, ವಿಚಿತ್ರ ವರ್ತನೆ, ಆದಾಗ್ಯೂ ಸೈನಿಕರು ಯಾವ ರೀತಿ ತಮ್ಮನ್ನು ತಾವು ತೊಡಗಿಸಿಕೊಂಡರು ಎಲ್ಲವನ್ನು ಕಣ್ಣಿಗೆ ಕಟ್ಟುವಂತೆ ಜಿ.ಬಿ.ಷಾ ಎಲ್ಲವನ್ನೂ ತೆರೆದಿಟ್ಟಿದ್ದಾರೆ ಎಂದರು.

ಕದನಕಣದಲ್ಲೂ ಬೊಂಚ್ಲಿ ಬುದ್ಧಿಗೇಡಿಯಾಗಿ ಯಾವ ರೀತಿ ವರ್ತಿಸಿದ, ಸುಟ್ಟು ಗುಳ್ಳೆಗಳೆದ್ದ ರೀತಿ ಅವನನ್ನು ಮೋಡಿ ಮಾಡಿದ ರೈನಾ ಎನ್ನುವ ನಾಯಕಿಯ ಕುರಿತ ಕಥೆಯನ್ನು ಹೃದಯಸ್ಪರ್ಶಿಯಾಗಿ ವರ್ಣಿಸಿದ್ದಾರೆ ಎಂದರು.

ಅವಳ ಮೋಸದಾಟ, ಅಕ್ರಮ ಸಂಬಂಧ, ಪಿತೂರಿಗೆ ಬಲಿಯಾದ ಬೊಂಚ್ಲಿ ವಿಚ್ಛೇದನ ನೀಡಿ ಹೇಗೆ ಯೋಗ್ಯನಾದ ಎನ್ನುವುದನ್ನು ತಮ್ಮ ಕಥನದಲ್ಲಿ ವಿವರಿಸಿದ್ದಾರೆ.

ಇಬ್ಸನ್ ಮತ್ತು ಷಾ ನಡುವೆ ಹೋಲಿಕೆ ಮಾಡಿದ ಪ್ರೊಫೆಸರ್ ಗವಿನ್  ಷಾ ಅವರು ಜನರಿಗೆ ಉತ್ತಮ ಸಂದೇಶ ನೀಡುವ ಮೂಲಕ ಕಥೆಗೆ ಆರೋಗ್ಯಯುತ ಮುಕ್ತಾಯ ನೀಡುತ್ತಾರೆ ಎಂದರು.

ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಕೆ.ಆರ್.ಮಂಜುನಾಥ್, ಇಂಗ್ಲಿಷ್  ಉಪನ್ಯಾಸಕರುಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

Leave a Reply

comments

Related Articles

error: