ಪ್ರಮುಖ ಸುದ್ದಿ

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕೊರೋನಾ ವರದಿ ನೆಗೆಟಿವ್

ದೇಶ(ಭೋಪಾಲ್)ಆ.12:- ಕೋವಿಡ್-19 ಸೋಂಕು ತಗುಲಿ ಆಸ್ಪತ್ರೆಗೆ ಸೇರಿದ್ದ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಇಲ್ಲಿನ ಖಾಸಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಆರು ದಿನಗಳ ನಂತರ ನಡೆಸಿದ ಪರೀಕ್ಷೆಯಲ್ಲಿ ವರದಿ ನೆಗೆಟಿವ್ ಬಂದಿರುವುದಾಗಿ ತಿಳಿಸಿದ್ದಾರೆ.
61 ವರ್ಷದ ಚೌಹಾಣ್ ಅವರಿಗೆ ಜುಲೈ 25 ರಂದು ಕೊರೊನಾವೈರಸ್ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಬಳಿಕ ಆಸ್ಪತ್ರೆ ಸೇರಿದ್ದ ಅವರು, ಆಗಸ್ಟ್ 5 ರಂದು ಡಿಸ್ಚಾರ್ಜ್ ಆದಾಗಿನಿಂದಲೂ ಹೋಂ ಕ್ವಾರಂಟೈನ್‌ನಲ್ಲಿ ಇದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: