ಮೈಸೂರು

ಪೋಲಿಸ್ ವತಿಯಿಂದ ಪ್ರಕಟಿತಗೊಂಡಿರುವ ಸಮಗ್ರ ಮಾಹಿತಿಯ ಕೈಪಿಡಿ ವಿತರಣೆ

ಬೈಲಕುಪ್ಪೆ : ಕರ್ನಾಟಕ ರಾಜ್ಯ  ಮೈಸೂರು ಜಿಲ್ಲಾ ಪೋಲಿಸ್  ವತಿಯಿಂದ ಪ್ರಕಟಿತಗೊಂಡಿರುವ ಕೈಪಿಡಿಗಳನ್ನು ಶುಕ್ರುವಾರ ಬೈಲಕುಪ್ಪೆ ಆರಕ್ಷಕ ಠಾಣೆಗೆ ಒಳಪಡುವ ಎಲ್ಲಾ ಗ್ರಾಮ ಪಂಚಾಯತಿ ಕಛೇರಿಗಳಿಗೆ, ಸರಕಾರಿ ಶಾಲೆ- ಕಾಲೇಜುಗಳಿಗೆ ಸೇರಿದಂತೆ  ಇಲ್ಲಿನ ಸಬ್‍ಇನ್ಸ್‍ಪೆಕ್ಟರ್ ರಾಮಚಂದ್ರ ನಾಯಕ್ ಹಾಗೂ ಸಿಬ್ಬಂದಿಗಳು ವಿತರಿಸಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಮಾಹಿತಿಯನ್ನು ಕುರಿತು, ಸಾರ್ವಜನಿಕರಿಗಾಗಿ ಹಾಗೂ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಪೋಲಿಸ್ ಇಲಾಖೆಯ ಕುರಿತಾದ ಸಮಗ್ರ ಮಾಹಿತಿ ಮತ್ತು ಶಾಲೆಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಂಬಂಧ ಅನುಸರಿಸಬೇಕಾದ ಮಾರ್ಗಸೂಚಿಗಳು, ರಾಜ್ಯ ಸರ್ಕಾರಗಳ ಆಡಳಿತ ವ್ಯವಸ್ಥೆ ಹಾಗೂ ಜನಸಾಮಾನ್ಯರಿಗಾಗಿ ಇರುವ ಕಾನೂನು ಮತ್ತು ಯೋಜನೆಗಳ ಸಂಕ್ಷಿಪ್ತ ಮಾಹಿತಿ, ಮತ್ತು ಆಡಳಿತಾಂಗಗಳ ಸಮಗ್ರ ದೂರವಾಣಿ, ಭಾರತ ಸರ್ಕಾರದ ಇಲಾಖೆ ಮತ್ತು ಕರ್ನಾಟಕ ಸರ್ಕಾರದ ಇಲಾಖೆಗಳಿಗೆ ಸಂಬಂಧಪಟ್ಟ ಕಾರ್ಯವ್ಯಾಪ್ತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿರುವ ಪುಸ್ತಕಗಳನ್ನು ನೀಡಲಾಯಿತು.

ಮೈಸೂರು ಜಿಲ್ಲಾ ಪೋಲಿಸ್ ವತಿಯಿಂದ ಪ್ರಕಟಿತಗೊಂಡಿರುವ ಸಮಗ್ರ ಮಾಹಿತಿಯ ಕೈಪಿಡಿಗಳನ್ನು ಬೈಲಕುಪ್ಪೆಯ ಉರ್ದುಶಾಲೆಯ ಶಿಕ್ಷಕಿ ಹಾಗೂ ವಿದ್ಯಾರ್ಥಿಗಳಿಗೆ ಬೈಲಕುಪ್ಪೆ ಆರಕ್ಷಕ ಸಿಬ್ಬಂದಿಗಳು ನೀಡಿದರು.  (ಆರ್.ಬಿ.ಆರ್-ಎಸ್.ಎಚ್)

Leave a Reply

comments

Related Articles

error: