ಪ್ರಮುಖ ಸುದ್ದಿಮೈಸೂರು

ಡಾ.ಗೀತಾಮಹದೇವಪ್ರಸಾದ್ ಪರ ಮತ ಯಾಚಿಸಿದ ಸತೀಶ್ ಜಾರಕಿಹೊಳಿ

ಗುಂಡ್ಲುಪೇಟೆಯಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಸಣ್ಣ ಕೈಗಾರಿಕೆಗಳ ಸಚಿವ ಸತೀಶ್ ಜಾರಕಿಹೊಳಿ ಗುಂಡ್ಲುಪೇಟೆ ವಿಧಾನಸಭಾ ಕಾಂಗ್ರೆಸ್ ಅಭ್ಯರ್ಥಿ ಡಾ.ಗೀತಾ ಮಹದೇವಪ್ರಸಾದ್ ಪರ ಮತ ಯಾಚಿಸಿದರು.

ತೆರಕನಾಂಬಿಗೆ ತೆರಳಿ ರೋಡ್ ಶೋ, ಸಭೆಗಳನ್ನು ನಡೆಸಿದ ಅವರು  ಚಾಮರಾಜನಗರ ಜಿಲ್ಲೆಗೆ ಮಹದೇವಪ್ರಸಾದ್ ಶಾಸಕರಾಗಿ, ಸಚಿವರಾಗಿ ಸಲ್ಲಿಸಿದ ಸೇವೆಗಳನ್ನು, ಅಭಿವೃದ್ಧಿ ಕಾರ್ಯಗಳನ್ನು ಜನತೆಯ ಮುಂದಿರಿಸಿದರು.  ಇನ್ನೂ ಹೆಚ್ಚಿನ ಸೇವೆ ನೀಡಲು ಗೀತಾ ಅವರನ್ನು ಬೆಂಬಲಿಸಿ ಎಂದರು.  ಸಂದರ್ಭ ಗೀತಾ ಮಹದೇವಪ್ರಸಾದ್ ಅವರ ಪುತ್ರ ಗಣೇಶ್ ಪ್ರಸಾದ್ ಜಿ.ಪಂ.ಅಧ್ಯಕ್ಷ ಚಂದ್ರು, ಕಾಂಗ್ರೆಸ್ ಮುಖಂಡ ರವಿ ಸೇರಿದಂತೆ ಕಾಂಗ್ರೆಸ್ ನ ನೂರಾರು ಕಾರ್ಯಕರ್ತರು ಸತೀಶ್ ಜಾರಕಿಹೊಳಿಯವರ ಜೊತೆಗಿದ್ದರು. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: